ಬೆಂಗಳೂರು | ಸಿಬ್ಬಂದಿ ಮೇಲೆ ಅತ್ಯಾಚಾರ ಆರೋಪ: ಯೂಟ್ಯೂಬ್ ಸುದ್ದಿ ಚಾನೆಲ್ ಸಂಪಾದಕನ ವಿರುದ್ಧ ದೂರು

Update: 2022-11-03 17:19 GMT

ಬೆಂಗಳೂರು, ನ.3: ಕಚೇರಿಯ ಮಹಿಳಾ ಸಿಬ್ಬಂದಿಯನ್ನು ಅತ್ಯಾಚಾರ ಮಾಡಿ ಗರ್ಭವತಿ ಮಾಡಿದ ಆರೋಪ ಸಂಬಂಧ ಯೂಟ್ಯೂಬ್ ಸುದ್ದಿ ವಾಹಿನಿಯೊಂದರ ಸಂಪಾದಕನೋರ್ವನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 

‘ಕದಂಬ ನ್ಯೂಸ್’ ಹೆಸರಿನ ಯೂಟ್ಯೂಬ್ ಸುದ್ದಿ ವಾಹಿನಿ ಎಂಡಿ ಸ್ಟುಡಿಯೊ ಫೋಟೋಗ್ರಾಫಿ ಸಂಪಾದಕ ಪಿ.ಎಚ್.ಮಹೇಶ್ ಎಂಬಾತನ ವಿರುದ್ಧ ಇದೇ ಸುದ್ದಿ ವಾಹಿನಿಯ ಮಹಿಳಾ ಸಿಬ್ಬಂದಿ ದೂರು ಸಲ್ಲಿಸಿದ್ದು,ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ತಮ್ಮ ಕಚೇರಿಗೆ ಕರೆತಂದು ಉದ್ಯೋಗ ನೀಡಿದ್ದು, ಅನಂತರ ವಿವಾಹ ಮಾಡಿಕೊಳ್ಳುವ ನೆಪದಲ್ಲಿ ಪಿ.ಎಚ್.ಮಹೇಶ್ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಬಾಗಲೂರು ಹಾಗೂ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಕಠಿಣ ಕ್ರಮ ಜರುಗಿಸದ ಕಾರಣ ಆತ ಜಮೀನು ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿಹಾವೇರಿ: ತಹಶೀಲ್ದಾರ್ ಗಿರೀಶ್ ಸ್ವಾದಿ ನಾಪತ್ತೆ; ದೂರು ದಾಖಲು

Similar News