ಹೈಕೋರ್ಟ್ ಉದ್ಯೋಗಿಯ ಹನಿಟ್ರ್ಯಾಪ್ ಆರೋಪ: ಇಬ್ಬರು ಮಹಿಳೆಯರು ಸೇರಿ 10 ಮಂದಿಯ ಬಂಧನ

Update: 2022-11-05 11:35 GMT

ಬೆಂಗಳೂರು, ನ. 5: ಹೈಕೋರ್ಟ್ ಉದ್ಯೋಗಿನೋರ್ವನನ್ನು ಹನಿಟ್ರ್ಯಾಪ್‍ಗೆ ಸಿಲುಕಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ  ಮಹಿಳೆಯರು ಸೇರಿ ಹಲವರನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅನುರಾಧ, ಕಾವ್ಯ, ಸಿದ್ದರಾಜು ಸೇರಿ 10 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಎರಡು ವರ್ಷದ ಹಿಂದೆ ಪ್ರಕರಣವೊಂದರ ಸಂಬಂಧ ಹೈಕೋರ್ಟ್ ಉದ್ಯೋಗಿಗೆ ಆರೋಪಿ ಅನುರಾಧಾಪರಿಚಯವಾಗಿದ್ದು, ಇತ್ತೀಚಿಗೆ ಉದ್ಯೋಗಿಯಿಂದ ಸಾಲ ಪಡೆದಿದ್ದಾರೆ. ಇದನ್ನು ನೀಡಲು ಮನೆಗೆ ಹೋಗಿದ್ದಾಗ ಆರೋಪಿಗಳು ಗುಂಪು ಸೇರಿ ಹಲ್ಲೆ ನಡೆಸಿ ಹಣ ಬೇಡಿಕೆಯಿಟ್ಟಿದರು ಎನ್ನಲಾಗಿದೆ.

ಅಲ್ಲದೆ, ಅನುರಾಧವೊಂದಿಗೆ ಇರುವ ವಿಡಿಯೊ ಅನ್ನು ಪತ್ನಿ, ಕುಟುಂಬಸ್ಥರಿಗೆ ಕಳುಹಿಸುವುದಾಗಿಯೂ ಬೆದರಿಕೆ ಹಾಕಿದ್ದರು. ಈ ಸಂಬಂಧ ದಾಖಲಾದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.

Similar News