2047ರ ವೇಳೆಗೆ ಬೆಂಗಳೂರು ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿ ರಾರಾಜಿಸಲಿದೆ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2022-11-05 18:20 GMT

ಬೆಂಗಳೂರು, ನ. 5: ‘ಅಯೋಧ್ಯಾ ಆಂದೋಲನದಲ್ಲಿ ಜನರು ಇಟ್ಟಿಗೆಗಳನ್ನು ನೀಡಿದಂತೆ, ಪಟೇಲರ ಪ್ರತಿಮೆ ಸ್ಥಾಪನೆ ಸಂದರ್ಭದಲ್ಲಿ ಲೋಹ ಕೊಟ್ಟಂತೆ, ಇದೀಗ ಕೆಂಪೇಗೌಡರ ಗೌರವಾರ್ಥ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಶನಿವಾರ ಯಲಹಂಕದಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪವಿತ್ರ ಮೃತ್ತಿಕಾ ಸಂಗ್ರಹವು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ, ‘ಕೆಂಪೇಗೌಡರು ಕಟ್ಟಿದ ಬೆಂಗಳೂರು ಇವತ್ತು ಅಭಿವೃದ್ಧಿಯ ಸಂಕೇತ. ಇಂದು ಐಟಿ-ಬಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಂಬರ್ ಒನ್ ಎನಿಸಿಕೊಂಡಿದೆ. 2047ರ ಹೊತ್ತಿಗೆ ನಗರವು ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿ ರಾರಾಜಿಸಲಿದೆ’ ಎಂದು ಬಣ್ಣಿಸಿದರು.

ಈ ವೇಳೆ ಹಾಜರಿದ್ದ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ವಿಮಾನ ನಿಲ್ದಾಣ ಸಮುಚ್ಚಯದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಸ್ಥಾಪನೆಯು ಅಶ್ವತ್ಥನಾರಾಯಣ ಅವರ ಕನಸಿನ ಯೋಜನೆ ಆಗಿದೆ. ಇದರಿಂದ ಕೆಂಪೇಗೌಡರ ಭವ್ಯ ವ್ಯಕ್ತಿತ್ವವು ಪ್ರತಿಯೊಬ್ಬರಿಗೂ ಅನುಭವಕ್ಕೆ ಬರಲಿದೆ' ಎಂದು ನುಡಿದರು.

Similar News