×
Ad

ಸುರತ್ಕಲ್: ಶಿಕ್ಷಕಿಗೆ ಹಲ್ಲೆ ಪ್ರಕರಣ; ಆರೋಪಿ ಸೆರೆ

Update: 2022-11-06 23:56 IST

ಸುರತ್ಕಲ್, ನ.6: ಕಾಟಿಪಳ್ಳ 2ನೇ ಬ್ಲಾಕ್ ನ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಮುಹಮ್ಮದ್ ಹನೀಫ್ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾದವರನ್ನು ಕಾಟಿಪಳ್ಳ 2ನೇ ಬ್ಲಾಕ್ ನ ಖಾಸಗಿ ಶಾಲೆಯ ಶಿಕ್ಷಕಿ ಚಂದ್ರಕಲಾ ಎಂದು ತಿಳಿದು ಬಂದಿದೆ.

ಹನೀಫ್‌ನ ಪತ್ನಿ, ಶಿಕ್ಷಕಿ ಚಂದ್ರಕಲಾ ಅವರಿಂದ ಹಣ ಸಾಲವಾಗಿ ಪಡೆದಿದ್ದು, ಸಾಲವನ್ನು ಹಿಂದಿರುಗಿಸುವಂತೆ ಶಿಕ್ಷಕಿ ಹನೀಫ್‌ನ ಪತ್ನಿಗೆ ತಿಳಿಸಿದ್ದರು. ಹನೀಫ್‌ನ ಪುತ್ರ ಅದೇ ಖಾಸಗಿ ಶಾಲೆಯ ವಿದ್ಯಾರ್ಥಿ. ಅದರಂತೆ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ ನಡೆಯುತ್ತಿದ್ದ ವೇಳೆ ಶಿಕ್ಷಕಿ ತನ್ನ ಮಗುವಿನ ಬಗ್ಗೆ ಹೀನಾಯವಾಗಿ ಮಾತನಾಡಿದರು ಎಂದು ಹನೀಫ್ ಶಿಕ್ಷಕಿಯ ಕೆನ್ನೆಗೆ ಹೊಡೆದಿದ್ದ ಎಂದು ದೂರಲಾಗಿದೆ.

ಘಟನೆಯ ಬಳಿಕ ಶಿಕ್ಷಕಿ ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸುರತ್ಕಲ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಹನೀಫ್ ನನ್ನು ಬಂಧಿಸಿದ್ದಾರೆ.

Similar News