ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್: ಭಾರತ ವಿರುದ್ಧ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

Update: 2022-11-10 07:51 GMT

ಅಡಿಲೇಡ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಗುರುವಾರ ಭಾರತದ ವಿರುದ್ಧ ಟಾಸ್ ಜಯಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಇಂಗ್ಲೆಂಡ್ ನ ಮಾರ್ಕ್ ವುಡ್ ಹಾಗೂ  ಡೇವಿಡ್ ಮಲಾನ್ ಗಾಯಗೊಂಡಿದ್ದಾರೆ.  ಈ ಇಬ್ಬರ ಬದಲಿಗೆ ಕ್ರಿಸ್ ಜೋರ್ಡಾನ್ ಹಾಗೂ  ಫಿಲ್ ಸಾಲ್ಟ್ ಆಯ್ಕೆಯಾಗಿದ್ದಾರೆ.

ದಿನೇಶ್ ಕಾರ್ತಿಕ್ ಅವರ ಫಿನಿಶಿಂಗ್ ಕೌಶಲ್ಯಕ್ಕಿಂತ ಎಡಗೈ ಬ್ಯಾಟರ್ ರಿಷಭ್ ಪಂತ್ ಗೆ ಭಾರತ  ಆದ್ಯತೆ ನೀಡಿದೆ.

Similar News