ಸೋಮೇಶ್ವರ: ಟಿಪ್ಪು ಜಯಂತಿ ಆಚರಣೆ
ಉಳ್ಳಾಲ, ನ.10: ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ.ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಗುರುವಾರ ಸೋಮೇಶ್ವರ ಪಶ್ಚಿಮ್ ಪುನರ್ವಸತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಹಝ್ರತ್ ಟಿಪ್ಪು ಸುಲ್ತಾನ್‌ರ ಜನ್ಮದಿನ ಆಚರಿಸಲಾಯಿತು.
ಪತ್ರಕರ್ತ ವಿದ್ಯಾಧರ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಟಿಪ್ಪುಸುಲ್ತಾನ್ ಅಭಿಮಾನಿ ಗಳ ಮಹಾವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಪಶ್ಚಿಮ ರಿಹಾಬ್‌ನ ರೋಹಿತ್ ಸಾಂಕ್ಟೂಸ್ ಅವರನ್ನು ಸನ್ಮಾನಿಸಲಾಯಿತು. ಉಳ್ಳಾಲ ನಗರಸಭೆಯ ಮಾಜಿ ಸದಸ್ಯ ಖಲೀಲ್ ಮುಕಚ್ಚೇರಿ, ಮುನ್ನೂರು ಗ್ರಾಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಂ, ಮಹಾ ವೇದಿಕೆಯ ಗೌರವಾಧ್ಯಕ್ಷ ಇಬ್ರಾಹೀಂ ಲಬ್ಬೈಕ್, ವಿಷ್ಣುಮೂರ್ತಿ ಭಟ್, ಉಪಾಧ್ಯಕ್ಷ ಮ್ಯಾಕ್ಸಿಂ ಡಿಸೋಜ, ಕಾಂಗ್ರೆಸ್ ಮಂಗಳೂರು ದಕ್ಷಿಣ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಓಸ್ವಲ್ಟ್ ಡಿಸೋಜ, ಉದ್ಯಮಿಗಳಾದ ಶರೀಫ್ ಬಜ್ಪೆ, ಸಂಶುದ್ದೀನ್ ಹರೇಕಳ, ಬದ್ರುದ್ದೀನ್ ಉಪಸ್ಥಿತರಿದ್ದರು. ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಿಸಿದರು.