×
Ad

ಮೂಳೂರಿನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ

Update: 2022-11-10 20:28 IST

ಕಾಪು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನ ಅಲ್ - ಇಹ್ಸಾನ್ ಎಜುಕೇಶನ್ ಸೆಂಟರ್‍ನಲ್ಲಿ ವಿದ್ಯಾರ್ಥಿಗಳಿಗೆ ಫಾಲ್ಕನ್ ಶಾಹೀನ್ ಬೆಂಗಳೂರು ಇದರ ವತಿಯಿಂದ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಜೆಇಎಫ್  ಬಗ್ಗೆ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು. 

ಸಂಪನ್ಮೂಲ ವ್ಯಕ್ತಿಯಾಗಿ ಫಾಲ್ಕನ್ ಶಾಹೀನ್ ಬೆಂಗಳೂರು ಇದರ ಆಡಳಿತ ನಿರ್ದೇಶಕ ಅಬ್ದುಲ್ ಸುಭಾನ್ ಶಿಬಿರವನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ಅಲ್ - ಇಹ್ಸಾನ್ ಎಜುಕೇಶನ್ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ವೈ,ಬಿ.ಸಿ. ಬಶೀರ್ ಆಲಿ ಮೂಳೂರು  ಅಲ್ - ಇಹ್ಸಾನ್ ಎಜುಕೇಶನ್ ಸೆಂಟರ್‍ನ  ಸಲಹೆಗಾರರಾದ ಅನ್ವರ್ ಗೂಡಿನಬಳಿ, ರಫೀಕ್ ಮಾಸ್ಟರ್, ಮತ್ತು ಸಂಸ್ಥೆಯ ವ್ಯವಸ್ಥಾಪಕರಾದ ಮೌಲಾನಾ ಮುಸ್ತಫಾ ಸಅದಿ, ಉಪಸ್ಥಿತರಿದ್ದರು. 
ಸಂಸ್ಥೆಯ ಪ್ರಾಂಶುಪಾಲರಾದ ಹಬೀಬು ರಹಿಮಾನ್ ಕೆ.ಎಸ್ ಪ್ರಾಸ್ತಾವಿಕ ಭಾಷಣಗೈದರು.

Similar News