ಬೆಂಗಳೂರು | ಅಪ್ರಾಪ್ತೆಯ ಗರ್ಭಿಣಿ ಮಾಡಿದ್ದ ಪ್ರಕರಣ: ಆರೋಪಿಗೆ ಕೋರ್ಟ್ ನಿಂದ ಜೀವಾವಧಿ ಶಿಕ್ಷೆ

Update: 2022-11-10 15:20 GMT

ಬೆಂಗಳೂರು, ನ.10: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭವತಿ ಮಾಡಿದ್ದ ಆರೋಪಿ ತಮಿಳುನಾಡು ಮೂಲದ ಕಾಶಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಫ್‍ಟಿಎಸ್‍ಸಿ-2 ಕೋರ್ಟ್, ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ತಮಿಳುನಾಡಿನ ತಿರುವಣಾ ಮಲ್ಲೈ ಜಿಲ್ಲೆಯ ಅರ್ಯಾಂಪು ಗ್ರಾಮದ ಆರೋಪಿ ಕಾಶಿ, ಅಪ್ರಾಪ್ತ ಬಾಲಕಿ ಮೇಲೆ 2021ರ  ಮೇ ತಿಂಗಳಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ, ಗರ್ಭವತಿ ಮಾಡಿದ್ದ. ಆತನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಹಾರೋಹಳ್ಳಿ ವೃತ್ತ ನಿರೀಕ್ಷಕ ರಾಮಪ್ಪ ಬಿ ಗುತ್ತೇರ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಕೋರ್ಟ್‍ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಕಾರಣ ಪೋಕ್ಸೊ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಸರಕಾರಿ ವಕೀಲರಾದ ಸಿ.ಕೆ.ಶ್ರೀವಾಣಿ ಅವರು ವಾದ ಮಂಡಿಸಿದ್ದರು.    

Similar News