×
Ad

ಬೆಂಗಳೂರು ಭೇಟಿಗೆ ಉತ್ಸುಕನಾಗಿದ್ದೇನೆ: ಪ್ರಧಾನಿ ಮೋದಿ ಟ್ವೀಟ್

Update: 2022-11-10 21:08 IST

ಬೆಂಗಳೂರು, ನ.10: 'ಬೆಂಗಳೂರು (Bengaluru) ನಗರಕ್ಕೆ ನ.11ರಂದು ಭೇಟಿ ನೀಡಲು ಉತ್ಸುಕವಾಗಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ''ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸುವ ಅವಕಾಶ ನನಗೆ ಸಿಕ್ಕ ಗೌರವ. ಇದೇ ವೇಳೆ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2, ಚೆನ್ನೈ-ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‍ಪ್ರೆಸ್ ಹಾಗೂ ಭಾರತ್ ಗೌರವ್ ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಲಾಗುವುದು'' ಎಂದು ತಿಳಿಸಿದ್ದಾರೆ.

ನಾಳೆ  (ಶುಕ್ರವಾರ) ಬೆಳಗ್ಗೆ 10 ಗಂಟೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಶಾಸಕರ ಭವನದ ಆವರಣದಲ್ಲಿರುವ ಕನಕದಾಸ ಹಾಗೂ ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಹಾಗೂ ಭಾರತ್ ಗೌರವ್ ಕಾಶಿ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

Similar News