ಕಂತ್ರೆಲಾಂತ್ಲೆಂ

Update: 2022-11-11 05:02 GMT

ಇತ್ತೀಚೆಗೆ ಸಂತ ಅಲೋಶಿಯಸ್ ಪ್ರಕಾಶನದಡಿಯಲ್ಲಿ ಲೋಕಾರ್ಪಣೆಗೊಂಡ ಪುಸ್ತಕ ಮೊಲಿ ಮಿರಾಂದ ಅವರು ಬರೆದ ‘ಕಂತ್ರೆಲಾಂತ್ಲೆಂ’ 2019ರಲ್ಲಿ ಪ್ರಕಟವಾದ ಬಿ.ಎಂ.ರೋಹಿಣಿ ಅವರ ಆತ್ಮಚರಿತ್ರೆ ‘ನಾಗಂದಿಗೆಯೊಳಗಿಂದ’ ಎಂಬ ಕನ್ನಡ ಮೂಲಕೃತಿಯನ್ನು ಕೊಂಕಣಿ ಭಾಷೆಗೆ ತರ್ಜುಮೆಗೊಳಿಸಿದುದಾಗಿದೆ.

 ಈ ಆತ್ಮಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸುಧಾ ಇನ್ಫೋಸಿಸ್ ಪ್ರಶಸ್ತಿ ದೊರಕಿದೆ. ಇದು ಬಿ.ಬಿ.ಎ.ಡಿಗ್ರಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಬರಲಿದೆ. ಮೂಲ ಲೇಖಕಿ ಬಿಲ್ಲವ ಸಮಾಜದ ತುಳು ಭಾಷಿಕ ಕುಟುಂಬದವರು. ಅನುವಾದಕಿ ಮಂಗಳೂರು ಕೆಥೊಲಿಕ್ ಸಮಾಜದ ಕೊಂಕಣಿ ಭಾಷಿಕ ಕುಟುಂಬದವರು. 

ಇಬ್ಬರೂ ಮಂಗಳೂರಿನ ಕುಲಶೇಖರದ ಪರಿಸರದಲ್ಲೇ ಬೆಳೆದು ವಿದ್ಯಾಭ್ಯಾಸ ಪಡೆದವರು. ಲೇಖಕಿ ಬಿ.ಎಂ. ರೋಹಿಣಿ ಕುಡುಪು ನಿವಾಸಿ. ಅನುವಾದಕಿ ಮೊಲಿ ಮಿರಾಂದ ಕುಲಶೇಖರದಲ್ಲೇ ಹುಟ್ಟಿ ಅಲ್ಲೇ ಬೆಳೆದು, ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದವರು. ಲೇಖಕಿಯ ಮೇಲೆ ಕೊಂಕಣಿ ಸಮಾಜದ ಅಪಾರ ಪ್ರಭಾವವಿದೆ. 

ಹಾಗಾಗಿ ಕೊಂಕಣಿ ಸಮಾಜದವರಲ್ಲದೆ ಹೊರಗಿನ ವ್ಯಕ್ತಿಯೋರ್ವರ ಚಿಂತನೆ ಕೊಂಕಣಿ ಸಮಾಜದ ಬಗ್ಗೆ, ಅದರಲ್ಲೂ ಕ್ರೈಸ್ತ ಕೊಂಕಣಿ ಸಮುದಾಯದ ಬಗ್ಗೆ ಏನಿದೆ ಎಂಬುದನ್ನು ಅರಿಯಲು ಪ್ರತಿಯೋರ್ವ ಕೊಂಕಣಿ ಸ್ತ್ರೀಯರು, ಕನ್ಯಾಸ್ತ್ರೀಯರು, ಶಾಲೆ ನಡೆಸುವ ಸ್ತ್ರೀಯರು, ಸ್ತ್ರೀಯರನ್ನು ಕೀಳಾಗಿ ಪರಿಗಣಿಸುವವರು ಮತ್ತು ಪುರುಷ-ಸ್ತ್ರೀ ಮಧ್ಯೆ ಗಂಡನೇ ಮೇಲೆಂಬ ಚಿಂತನೆ ಈಗಲೂ ನಂಬಿಕೊಂಡು ಬಂದವರು ಈ ಪುಸ್ತಕವನ್ನು ಓದಲೇ ಬೇಕು.

(ಮುನ್ನುಡಿಯಿಂದ)

ಕೃತಿ: ಕಂತ್ರೆಲಾಂತ್ಲೆಂ

(ಬಿ.ಎಂ. ರೋಹಿಣಿ ಆತ್ಮ್‌ಕತಾ)

ಕೊಂಕಣಿಗೆ: ಮೊಲಿ ಮಿರಾಂದ, ಕುಲಶೇಖರ

ಬೆಲೆ: 350 ರೂ. ಪ್ರಕಾಶಕರು:

ಸೈಂಟ್ ಅಲೋಶಿಯಸ್ ಪ್ರಕಾಶನ, ಸೈಂಟ್ ಅಲೋಶಿಯಸ್ ಕಾಲೇಜ್, ಕೊಡಿಯಾಲ್‌ಬೈಲ್, ಮಂಗಳೂರು-575005

Similar News