ಟ್ವೆಂಟಿ-20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಸೋಲು: ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಟ್ವೀಟ್

Update: 2022-11-11 14:04 GMT

ಹೊಸದಿಲ್ಲಿ: ಭಾರತ ಟ್ವೆಂಟಿ -20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳಿಂದ ಸೋತು ನಿರ್ಗಮಿಸಿದ ನಂತರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿVirat Kohli  ಶುಕ್ರವಾರ ತಮ್ಮ ಟ್ವಿಟರ್ ನಲ್ಲಿ ಹೃದಯಸ್ಪರ್ಶಿ ಟಿಪ್ಪಣಿ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಗುರುವಾರ  ಭಾರತ ಹೀನಾಯವಾಗಿ ಸೋತ ನಂತರ ಟೀಮ್ ಇಂಡಿಯಾ ಆಟಗಾರರು  ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಆಟಗಾರರು ಬಹಳಷ್ಟು "ನಿರಾಶೆ" ಯೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾರೆ., ತಂಡವು ಪಂದ್ಯಾವಳಿಯಿಂದ ಕೆಲವು ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡು ಬಲವಾಗಿ ಪುಟಿದೇಳಬಹುದು ಎಂದು ಕೊಹ್ಲಿ ಹೇಳಿದ್ದಾರೆ.

" ನಮ್ಮ ಕನಸುಗಳನ್ನು ಸಾಧಿಸಲಾಗದೆ ನಿರಾಶೆಯ ಭಾವ ತುಂಬಿದ ಹೃದಯದೊಂದಿಗೆ ನಾವು ಆಸ್ಟ್ರೇಲಿಯ ತೀರವನ್ನು ತೊರೆಯುತ್ತಿದ್ದೇವೆ.  ಆದರೆ ನಾವು ಒಂದು ತಂಡವಾಗಿ ಹಲವು ಸ್ಮರಣೀಯ ಕ್ಷಣಗಳನ್ನು, ಭವಿಷ್ಯದಲ್ಲಿ ಮತ್ತಷ್ಟು ಉತ್ತಮಗೊಳ್ಳುವ ಗುರಿಯನ್ನು ಇಲ್ಲಿಂದ ಹೊತ್ತಯ್ಯಬಹುದು" ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಕ್ರೀಡಾಂಗಣದಲ್ಲಿ ನಮ್ಮನ್ನು ಬೆಂಬಲಿಸಲು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ನಮ್ಮ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ಈ ಜರ್ಸಿಯನ್ನು ಧರಿಸಲು ಹಾಗೂ ನಮ್ಮ ದೇಶವನ್ನು ಪ್ರತಿನಿಧಿಸಲು ನಾನು ಯಾವಾಗಲೂ ಹೆಮ್ಮೆ ಪಡುತ್ತೇನೆ ಎಂದು ಕೊಹ್ಲಿ ಟ್ವೀಟಿಸಿದ್ದಾರೆ

ಟೂರ್ನಿಯಲ್ಲಿ ಅಗ್ರ ರನ್  ಸ್ಕೋರರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕೊಹ್ಲಿ ಆರು ಪಂದ್ಯಗಳಿಂದ 98.66 ಸರಾಸರಿಯಲ್ಲಿ ಒಟ್ಟು 296 ರನ್ ಗಳಿಸಿದ್ದಾರೆ.  ಗುರುವಾರ ಅಡಿಲೇಡ್ ಓವಲ್‌ನಲ್ಲಿ ಭಾರತ 10 ವಿಕೆಟ್‌ಗಳಿಂದ ಸೋತಿದ್ದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 50 ರನ್ ಸೇರಿದಂತೆ ಪಂದ್ಯಾವಳಿಯಲ್ಲಿ ಕೊಹ್ಲಿ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದರು.

Similar News