​ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ ಪ್ರಕರಣ: ಮಾಹಿತಿ ನೀಡದ ಪಿರಿಯಾಪಟ್ಟಣ ತಹಶೀಲ್ದಾರ್ ಗೆ ದಂಡ

Update: 2022-11-11 15:38 GMT

ಮಂಗಳೂರು: ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಸೂಕ್ತ ಮಾಹಿತಿ ನೀಡದಿರುವುದು ಮತ್ತು ತಪ್ಪು ಹಿಂಬರಹ ನೀಡಿರುವ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ತಹಶೀಲ್ದಾರ್ ಗೆ ರಾಜ್ಯ ಮಾಹಿತಿ ಹಕ್ಕು ಅಯೋಗ ರೂ 15 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಕಂದಾಯ ಇಲಾಖೆ ಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕೊಪ್ಪ ಪಂಚಾಯತ್ ನ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಹಶೀಲ್ದಾರರ ಮೂಲಕ ಪಡೆಯಬೇಕಾಗಿದ್ದ ದಾಖಲೆಗಾಗಿ ಅರ್ಜಿದಾರರು ಮಾಹಿತಿ ಹಕ್ಕು ಕಾಯಿದೆಯಡಿ  ಮಂಗಳೂರು ಮಂಗಳಾ ದೇವಿಯ ಮಿಷನ್ ಕಂಪೌಂಡ್ ನ ನಿವಾಸಿ ಮೊಹಮ್ಮದ್ ಝಮೀರ್ 2021ರಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಅರ್ಜಿದಾರರಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪಿರಿಯಾಪಟ್ಟಣ ದ ತಹಶೀಲ್ದಾರ್ ಚಂದ್ರಮೌಳಿ ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿಲ್ಲ ಮತ್ತು ತಪ್ಪು ಹಿಂಬರಹವನ್ನು ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಎರಡು ತಿಂಗಳ ಸಂಬಳದಿಂದ ರೂ.15,000.00ವನ್ನು (ನವೆಂಬರ್ ಮತ್ತು ಡಿಸೆಂಬರ್ 2022ರಲ್ಲಿ )ರಾಜ್ಯ ಮಾಹಿತಿ ಹಕ್ಕು ಅಯೋಗಕ್ಕೆ ದಂಡ ಪಾವತಿಸಲು ಆದೇಶಿಸಿದೆ ಮತ್ತು ಮೇಲ್ಮನವಿದಾರರಿಗೆ 30 ದಿನಗಳ ಒಳಗೆ ಮಾಹಿತಿಯನ್ನು ಒದಗಿಸಿ ಸ್ವೀಕೃತಿ ಯನ್ನು ದೃಢೀಕರಿಸಿ, ಅದರ ಅನುಪಾಲನಾ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಪಿರಿಯಾಪಟ್ಟಣ ತಹಶೀಲ್ದಾರ್ ಚಂದ್ರಮೌಳಿಯವರಿಗೆ  ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಆದೇಶಿಸಿದ್ದಾರೆ.

Similar News