ಟ್ವೆಂಟಿ-20 ವಿಶ್ವಕಪ್ ಫೈನಲ್: ಇಂಗ್ಲೆಂಡ್ ಗೆಲುವಿಗೆ 138 ರನ್ ಗುರಿ ನೀಡಿದ ಪಾಕಿಸ್ತಾನ

Update: 2022-11-13 09:57 GMT

ಮೆಲ್ಬೋರ್ನ್: ಪಾಕಿಸ್ತಾನ ತಂಡ ರವಿವಾರ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ಜಯಿಸಲು ಇಂಗ್ಲೆಂಡ್ ಗೆ 138  ರನ್ ಗುರಿ ನೀಡಿದೆ.

ಎಂಸಿಜಿಯಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

ಪಾಕಿಸ್ತಾನ 20  ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಷ್ಟೇ ಶಕ್ತವಾಯಿತು.

ಬೌಲರ್  ಗಳಾದ ಸ್ಯಾಮ್ ಕರನ್(3-12) , ಆದಿಲ್ ರಶೀದ್( 2-22) ಹಾಗೂ ಜೋರ್ಡನ್ (2-27) 7 ವಿಕೆಟ್ ಹಂಚಿಕೊಂಡರು.

ಪಾಕ್ ಪರ ಶಾನ್ ಮಸೂದ್ 38 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಬಾಬರ್ ಆಝಂ(32 ರನ್) , ಶಾದಾಬ್ ಖಾನ್ (20 ರನ್) ಹಾಗೂ ಮುಹಮ್ಮದ್ ರಿಝ್ವಾನ್(15 ರನ್) ಎರಡಂಕೆಯ ಸ್ಕೋರ್ ಗಳಿಸಿದರು.

Similar News