ಬೆಂಗಳೂರು: ತಾಯಿ-ಮಗ ಆತ್ಮಹತ್ಯೆ

Update: 2022-11-13 13:34 GMT

ಬೆಂಗಳೂರು, ನ. 13: ನಗರದಲ್ಲಿ ತಾಯಿ-ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿ ಭಾಗ್ಯಮ್ಮ (57), ಪುತ್ರ ಶ್ರೀನಿವಾಸ್(33) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ವಯಸ್ಸಾದ ಹಿನ್ನೆಲೆ ಶ್ರೀನಿವಾಸ್ ಕೆಲವು ದಿನಗಳ ಹಿಂದೆ ತಾಯಿಯನ್ನು ಊರಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆದರೆ ಇದೇ ವಿಚಾರವಾಗಿ ಶ್ರೀನಿವಾಸ್ ಪತ್ನಿ ಸಂಧ್ಯಾ ತನ್ನ ಗಂಡನೊಂದಿಗೆ ನಿತ್ಯ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.

ರವಿವಾರ ಬೆಳಗ್ಗೆಯೂ ಇದೇ ವಿಚಾರಕ್ಕೆ ದಂಪತಿ ಜಗಳವಾಡಿದ್ದಾರೆ. ಬಳಿಕ ಮನನೊಂದು ಶ್ರೀನಿವಾಸ್ ತನ್ನ ತಾಯಿಯೊಂದಿಗೆ ತಾವು ವಾಸವಾಗಿದ್ದ ಮನೆಯ ಕೋಣೆಯಲ್ಲಿ ನೇಣುಬಿಗಿದು ಕೊಂಡು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆಮಾಡಿದ್ದು, ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. 

Similar News