×
Ad

‘ಕುಲಾಲ’ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

Update: 2022-11-13 23:13 IST

ಬೆಂಗಳೂರು, ನ. 13: ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದ ‘ಕುಲಾಲ’ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರಕಾರವುನಿಗಮ ಸ್ಥಾಪನೆ ಮಾಡಬೇಕು ಎಂದು ಕುಲಾಲ ಸಂಘ ಕುಲಾಲ ಸಂಘದ ಅಧ್ಯಕ್ಷರು ಪುರುಷೋತ್ತಮ್ ಚೇಂಡ್ಲಾ ಒತ್ತಾಯಿಸಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕುಲಾಲ ಸಂಘವು ಆಯೋಜಿಸಿದ್ದ ‘ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಬಹಕಾಲದಿಂದಲೂ ಕುಲಾಲ ಸಮುದಾಯವು ಶೋಷಣೆಗೆ ಒಳಗಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತುರಾಜಕೀಯ ಅತೀ ಹಿಂದುಳಿದ ಸಮುದಾಯವಾಗಿ ಉಳಿದಿದೆ. 1969ರಲ್ಲಿ ಸಮುದಾಯ ಅಭಿವೃದ್ಧಿಗಾಗಿ ಕುಲಾಲ ಸಂಘವನ್ನು ಸ್ಥಾಪನೆ ಮಾಡಲಾಯಿತು. ಸಂಘ ಸ್ಥಾಪನೆಯಾಗಿ ಸುಮಾರು ಐವತ್ತು ಸಂವತ್ಸರಗಳೇ ಕಳೆದರೂ, ಸರಕಾರದ ನೆರವು ಸಿಗದ ಕಾರಣ ಸಮುದಾಯವು ನೀರಿಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಿಲ್ಲ. ಹೀಗಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರಕಾರ ನಿಗಮ ಸ್ಥಾಪನೆ ಮಾಡಬೇಕು ಎಂದರು.

ಸಹಕಾರ ಸಚಿವಎಸ್.ಟಿ. ಸೋಮಶೇಖರ್ ಮಾತನಾಡಿ, ಕುಲಾಲ ಸಮುದಾಯ ಸರ್ವತೋಮುಖಅಭಿವೃದ್ಧಿಗಾಗಿ ಬೇಕಾದ ಸಹಕಾರನೀಡಲಾಗುವುದು. ಸಂಘಕ್ಕಾಗಿ ನಗರದಲ್ಲಿಕಟ್ಟಡ ನಿರ್ಮಿಸಲು ಸ್ಥಳ ನೀಡಲಾಗುತ್ತದೆ ಭರವಸೆ ನೀಡಿದರು. 

ಕಾರ್ಯಕ್ರಮದಲ್ಲಿ ಲೇಖಕಿ ಕುಶಲಾಕ್ಷೀ ವಿ.ಕಣ್ವತೀರ್ಥ, ನಾಗೇಶ್‍ಕುಲಾಲ್ ನಾಗರಕೊಡಗೆ, ಕರಿಸಿದ್ದಪ್ಪ ಕುಂಬಾರ, ಎಚ್. ನಯನಾಡು, ಮಂಜುನಾಥ್ ಕುಲಾಲ್ ಹಿಲಿಯಾಣ, ಮನೋಜ್‍ಕುಲಾಲ್ ಪುತ್ತೂರು ಸೇರಿ ಸಮುದಾಯದ ಸಾಧಕರಿಗೆಕುಲಾಲ ಕೀರಿಟ ಬಿರುದು ನೀಡಿ ಸನ್ಮಾನಿಸಲಾಯಿತು. ಮಹಾಲಕ್ಮೀಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಸಂಘದ ಗೌರವಾಧ್ಯಕ್ಷ ಜಿ.ಈಶ್ವರ ಮೂಲ್ಯ, ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್ ಜನ್ನಾಡಿ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಕು.ವಿ.ಕು ರವರ ‘ಆಸ್ತಿ ತುಳು’ ಕಥಾ ಸಂಕಲನ ಬಿಡುಗಡೆ ಮಾಡಲಾಯಿತು.  

Similar News