ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ʼಸೀ ವಿಜಿಲ್ʼ ಅಣಕು ಕಾರ್ಯಾಚರಣೆ

Update: 2022-11-15 15:47 GMT

ಮಂಗಳೂರು, ನ.15: ಭಯೋತ್ಪಾದನಾ ಕೃತ್ಯಗಳನ್ನು ತಡೆಯುವ ಸಲುವಾಗಿ ಭದ್ರತಾ ವಿಭಾಗಗಳನ್ನು ಸನ್ನದ್ಧಗೊಳಿಸುವ ಉದ್ದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ "ಸೀ ವಿಜಿಲ್" ಕಾರ್ಯಾಚರಣೆ ನಡೆಸಲಾಯಿತು.

ಎನ್ಎಸ್‌ಜಿ ಮತ್ತು ಪೊಲೀಸರು ಜಂಟಿಯಾಗಿಗೌಪ್ಯವಾಗಿ ಅಣಕು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂತಹ ಕಾರ್ಯಾಚರಣೆ ದೇಶದ ಹಲವು ಪ್ರಮುಖ ಕೇಂದ್ರಗಳಲ್ಲಿ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Similar News