ಬೆಂಗಳೂರು: ಪೋಷಕರು ಅಡ್ಡಿಪಡಿಸಿದ್ದಕ್ಕೆ ತಾವೇ ಮುಂದೆ ನಿಂತು ಪ್ರೇಮಿಗಳ ವಿವಾಹ ನಡೆಸಿದ ಪೊಲೀಸರು

Update: 2022-11-15 16:20 GMT

ಬೆಂಗಳೂರು, ನ.15: ಫೊಷಕರು ಅಡ್ಡಿಯಾದ ಹಿನ್ನೆಲೆಯಲ್ಲಿ ಫೋಲೀಸರೇ ಮುಂದೆ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿದ ಘಟನೆ ನೆಲಮಂಗಲ ನಗರ ಫೋಲೀಸ್ ಠಾಣೆಯಲ್ಲಿ ನಡೆದಿದೆ. 

ಕೆಆರ್‍ಪುರ ನಿವಾಸಿ ಕರುಬಸಪ್ಪ (24) ಹಾಗೂ ಕಾರವಾರ ಮೂಲದ ಬಿಂದು (19) ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಪ್ರೀತಿಯ ವಿಚಾರವನ್ನು ಮನೆಯಲ್ಲಿ ತಿಳಿಸಿದಾಗ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಫೋಲೀಸರು, ಪ್ರೇಮಿಗಳಿಬ್ಬರನ್ನು ನಗರದ ಕವಾಡಿ ಮಠದ ರುದ್ರೇಶ್ವರ ದೇಗುಲದಲ್ಲಿ ವಿವಾಹ ಮಾಡಿಸಿದ್ದಾರೆ. 

Similar News