ಮಾದಕ ವಸ್ತು ಸಾಗಾಟ ಆರೋಪ: ಮಹಿಳೆ ಸೇರಿ ಇಬ್ಬರ ಸೆರೆ

Update: 2022-11-15 16:24 GMT

ಬೆಂಗಳೂರು, ನ.15: ಮಾದಕ ವಸ್ತು ಸಾಗಾಟ ಆರೋಪ ಪ್ರಕರಣ ಸಂಬಂಧ ಮಹಿಳೆ ಸೇರಿ ಇಬ್ಬರನ್ನು ಇಲ್ಲಿನ ಸಿಸಿಬಿ ಪೊಲೀಸರು ಬಂಧಿಸಿ 5 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಷ್ಣು ಪ್ರಿಯ ಹಾಗೂ ಸಿಗಿಲ್ ವರ್ಗಿಸ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಹುಳಿಮಾವು ಠಾಣೆಯ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಸುಲಭವಾಗಿ ಹೆಚ್ಚಿನ ಹಣಗಳಿಸಲು ಮತ್ತೆ ಮಾದಕ ವಸ್ತು ಸಾಗಾಟದಲ್ಲಿ ತೊಡಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಆರೋಪಿಗಳ ವಿರುದ್ದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಇವರಿಂದ 5 ಲಕ್ಷ ಮೌಲ್ಯದ 11.37 ಗ್ರಾಂ ತೂಕದ ಎಂಡಿಎಂಎ ಎಕ್ಸ್ ಟೆನ್ಸಿ ಮಾತ್ರೆಗಳು, ಮೊಬೈಲ್ ಹಾಗೂ ವಾಹನ ಜಪ್ತಿ ಮಾಡಲಾಗಿದೆ.

Similar News