×
Ad

ನ.18ರಂದು ಉಡುಪಿ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ

Update: 2022-11-16 20:13 IST

ಉಡುಪಿ, ನ.16: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳನ್ನು  ಕೈಗೊಳ್ಳಲಾಗುವುದರಿಂದ ನ.18ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ 110ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಟಿ.ಎಂ.ಸಿ, ಜಾರ್ಕಳ, ಅಜೆಕಾರು ಮತ್ತು ಹಿರ್ಗಾನ ಫೀಡರ್‌ನಲ್ಲಿ ದುರ್ಗಾ, ಮಲೆಬೆಟ್ಟು, ಕಡಂಬಳ, ಹಿರ್ಗಾನ, ಮುಜೂರು, ನೆಲ್ಲಿಕಟ್ಟೆ, ಎಣ್ಣೆಹೊಳೆ, ಚಿಕ್ಕಾಲ್‌ಬೆಟ್ಟು, ಹೆಮುರ್ಂಡೆ, ಬಂಗ್ಲೆಗುಡ್ಡೆ, ಬಂಡಿಮಠ, ಕಲ್ಲೊಟ್ಟೆ, ಪೆರ್ವಾಜೆ, ತೆಳ್ಳಾರು, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿಸ್ಥಾನ, ಗಣಿತ ನಗರ, ಜಾರ್ಕಳ, ಮಂಗಿಲಾರು, ಅಜೆಕಾರು, ಅಂಡಾರು, ಕಡ್ತಲ, ಕುಕ್ಕುಜೆ, ಶಿರ್ಲಾಲು, ಕಾಡುಹೊಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Similar News