ಚಿಕಿತ್ಸೆ ನೆಪದಲ್ಲಿ ಮಹಿಳೆಯರ ಖಾಸಗಿ ಅಂಗಗಳ ವಿಡಿಯೋ ಚಿತ್ರೀಕರಣ: ಆರೋಪಿಯ ಬಂಧನ
ಬೆಂಗಳೂರು, ನ.16: ಆಕ್ಯುಪಂಚರ್(ಸೂಚಿ ಚಿಕಿತ್ಸೆ) ಚಿಕಿತ್ಸೆ ನೀಡುವುದಾಗಿ ಹೇಳಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಅಂಗಾಗಗಳನ್ನು ಮುಟ್ಟಿ ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮತ್ತಿಕೆರೆಯ ವೆಂಕಟರಮಣ ಎಂದು ಗುರುತಿಸಲಾಗಿದೆ. ಆರೋಪಿಯು ಮತ್ತಿಕೆರೆಯಲ್ಲಿ ತನ್ನ ಮನೆಯ ಬಳಿ ಒಂದು ರೂಮ್ ಅನ್ನು ಬಾಡಿಗೆ ಪಡೆದುಕೊಂಡು ಅಲ್ಲಿ ಆಕ್ಯುಪಂಚರ್ ಚಿಕಿತ್ಸೆಗೆ ಬರುವ ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಬಟ್ಟೆಗಳನ್ನು ತೆಗೆಸಿ ಅಂಗಾಗಗಳನ್ನು ಮುಟ್ಟುವುದು, ತನ್ನ ಮೊಬೈಲ್‍ನಿಂದ ಅವರಿಗೆ ತಿಳಿಯದ ಹಾಗೇ ವಿಡಿಯೋವನ್ನು ಚಿತ್ರಿಕರಣ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈತನ ವಿರುದ್ದ ಯಶವಂತಪುರ, ಬಸವನಗುಡಿ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದಂತೆ ಆರೋಪಿಯು ತಲೆ ಮರೆಸಿಕೊಂಡಿದ್ದನು. ಇನ್ಸ್ ಪೆಕ್ಟರ್ ಗೋವಿಂದರಾಜು ಅವರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ.