×
Ad

ಬೆಂಗಳೂರು; ಗುಂಡಿ ತಪ್ಪಿಸಲು ಹೋಗಿ ಬೈಕ್‍ನಿಂದ ಬಿದ್ದು ಕೋಮಾದಲ್ಲಿದ್ದ ಯುವಕ ಪ್ರಜ್ಞಾವಸ್ಥೆಗೆ

Update: 2022-11-17 19:43 IST

ಬೆಂಗಳೂರು (Bengaluru), ನ.17: ಗುಂಡಿ ತಪ್ಪಿಸಲು ಹೋಗಿ ಬೈಕ್‍ನಿಂದ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಸಂದೀಪ್ ಕಡೆಗೂ ಸಾವು ಬದುಕಿನ ಹೋರಾಟ ಜಯಿಸಿದ್ದು ಪ್ರಜ್ಞಾವಸ್ಥೆಗೆ ಮರಳಿ ಬಂದಿದ್ದಾರೆ. 

ವಿದ್ಯಾರಣ್ಯಪುರದ ಸಂದೀಪ್ ಕಳೆದ ನ.1ರಂದು ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಬಿದ್ದಿದ್ದು, ಸ್ನೇಹಿತರ ಜೊತೆ ಕ್ರಿಕೆಟ್ ಆಡಿ ವಾಪಸ್ ಬರುವಾಗ ಅವಘಡ ನಡೆದಿತ್ತು. ಹೆಬ್ಬಾಳದ ಖಾಸಗಿ ಅಸ್ಪತ್ರೆಯಲ್ಲಿ ಸಂದೀಪ್‍ಗೆ ಚಿಕಿತ್ಸೆ ಪಡೆಯುತ್ತಿದ್ದರು, ಪ್ರಜ್ಞಾಹೀನನಾಗಿ ಕೋಮಾ ಸ್ಥಿತಿಗೆ ತಲುಪಿದ್ದರು. ವೈದ್ಯರು ನಿರಂತರ ಒಂದು ವಾರ ಚಿಕಿತ್ಸೆ ನೀಡಿ ನಿಗಾ ವಹಿಸಿದ್ದರು. 

ಬೈಕ್ ಸವಾರ ಜೀವನ್ಮರಣದ ಹೋರಾಟ ಜಯಿಸಿದ್ದಾರೆ. ಬೈಕ್‍ನಿಂದ ಬಿದ್ದ ಬಗ್ಗೆ ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸಂದೀಪ್ ಪತ್ನಿ ಸೀಮಾ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದ್ದರು. 

ಸಂದೀಪ್ ಬುಧವಾರ ಕಣ್ಣು ಬಿಟ್ಟಿದ್ದು, ಇನ್ನೂ ಯಾರನ್ನು ಗುರುತು ಹಿಡಿಯುತ್ತಿಲ್ಲ. ಸ್ವಲ್ಪ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ ಎಂದು ಸಂದೀಪ್ ಪತ್ನಿ ಸೀಮಾ ಹೇಳಿದ್ದಾರೆ. ಇದುವರೆಗೂ ಅಸ್ಪತ್ರೆಗೆ 14 ಲಕ್ಷ ಹಣ ಖರ್ಚಾಗಿದೆ. ಮಾಧ್ಯಮದಲ್ಲಿ ವರದಿ ಪ್ರಸಾರವಾದ ನಂತರ ಹಲವರು ಸಹಾಯ ಮಾಡಿದ್ದಾರೆ. ಇನ್ನೂ ಹಲವು ತಿಂಗಳು ಚಿಕಿತ್ಸೆ ಅಗತ್ಯ ಹಿನ್ನಲೆ ಸಹಾಯದ ಅಗತ್ಯ ತುಂಬಾ ಇದೆ. ಈ ಖಾಸಗಿ ಅಸ್ಪತ್ರೆಯಲ್ಲಿ ತುಂಬಾ ಹಣ ಖರ್ಚಾಗುತ್ತಿದೆ ಎಂದು ತಿಳಿಸಿದರು. 

ಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ. ಇನ್ನೂ ರಸ್ತೆಯಲ್ಲಿ ಹಾಗೇ ಗುಂಡಿಗಳು ಇವೇ ಅವುಗಳನ್ನು ದಯಮಾಡಿ ಮುಚ್ಚಿ. ನಮಗೆ ಬಂದ ಪರಿಸ್ಥಿತಿ ಯಾರಿಗೂ ಬರುವುದು ಬೇಡ ಎಂದು ಸಂದೀಪ್ ಪತ್ನಿ ಸೀಮಾ ಮನವಿ ಮಾಡಿದರು.

Similar News