×
Ad

ಬೆಂಗಳೂರು | ಮಾನವ ಹಕ್ಕು ಅಧಿಕಾರಿಗಳ ಹೆಸರಿನಲ್ಲಿ ಬೆದರಿಕೆ ಆರೋಪ: ನಾಲ್ವರು ಮಹಿಳೆಯರು ಸೇರಿ 7 ಮಂದಿ ಸೆರೆ

Update: 2022-11-18 17:52 IST

ಬೆಂಗಳೂರು, ನ. 18: ಮಾನವ ಹಕ್ಕು ಅಧಿಕಾರಿಗಳ ಹೆಸರಿನಲ್ಲಿ ಬೆದರಿಕೆ ಆರೋಪ ಸಂಬಂದ ನಾಲ್ವರು ಮಹಿಳೆ ಸೇರಿ ಏಳು ಮಂದಿಯನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸುಶ್ಮಿತಾ, ಜಯಲಕ್ಷ್ಮಿ, ಇಂದಿರಾ, ರಮ್ಯಾ, ಧೃವರಾಜ್, ಪ್ರಕಾಶ್‍ಮೂರ್ತಿ, ಪ್ರದೀಪ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ. ಅನೂಪ್‍ಶೆಟ್ಟಿ ತಿಳಿಸಿದ್ದಾರೆ.

ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‍ನ ಮಾತಾಜಿ ಹೋಂ ಅಪ್ಲೈಯೆನ್ಸ್ ಅಂಗಡಿಗೆ ಮಾನವ ಹಕ್ಕು ಅಧಿಕಾರಿಗಳ ಹೆಸರಿನಲ್ಲಿ ಹೋಗಿ ನಿಮ್ಮ ಅಂಗಡಿಯಲ್ಲಿ ಅನಿಲ ಸಿಲಿಂಡರ್‍ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬೆದರಿಸಿ 2 ಸಾವಿರ ಹಣ ಸುಲಿಗೆ ಮಾಡಿದ್ದರು ಎನ್ನಲಾಗಿದೆ.

ಅದೇ ರೀತಿ ರಾಜಲಕ್ಷ್ಮಿ ಫ್ಯಾನ್ಸಿ ಸ್ಟೋರ್, ಬಾಲಾಜಿ ಹೋಂ ಅಪ್ಲೈಯೆನ್ಸ್‍ಗೂ ಹೋಗಿ 5 ಸಾವಿರ ಹಣ ಸುಲಿಗೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿದ ಕೊಡಿಗೇಹಳ್ಳಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದು ಅವರು ತಿಳಿಸಿದರು.  

Similar News