ವಿದ್ಯುತ್ ಶುಲ್ಕ ಬಾಕಿ: ಬಿಬಿಎಂಪಿ, ಜಲಮಂಡಳಿಗೆ ನೋಟಿಸ್
Update: 2022-11-18 18:18 IST
ಬೆಂಗಳೂರು, ನ. 18: ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್‍ಫೀಲ್ಡ್ ವಿಭಾಗದ ಜಲಮಂಡಳಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಸೇರಿ ಮತ್ತಿತರ ಸರಕಾರಿ ಕಚೇರಿಗಳು 236 ಕೋಟಿ ರೂ.ಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿದ್ದು, ಬೆಸ್ಕಾಂನ ಐದು ವಿಭಾಗಗಳೂ ಬಿಲ್ ಪಾವತಿಸಲು ಕೋರಿ ಬೆಸ್ಕಾಂ ಪ್ರತ್ಯೇಕ ನೋಟಿಸ್ ಜಾರಿಗೊಳಿಸಿದೆ.
ವಿದ್ಯುತ್ ಅದಾಲತ್: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ನಾಳೆ(ನ.19)ವಿದ್ಯುತ್ ಅದಾಲತ್ ನಡೆಯಲಿದೆ. ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೆ ಪರಿಹಾರ ಸೂಚಿಸುತ್ತಿದೆ. ಒದಗಿಸುತ್ತಿರುವ ಸೇವೆಗಳು ಮತ್ತು ಯೋಜನೆಗಳ ಕುರಿತು ಅದಾಲತ್‍ನಲ್ಲಿ ಗ್ರಾಹಕರಿಗೆ ಮಾಹಿತಿ ಒದಗಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.