×
Ad

ಮೂಡುಬಿದಿರೆ: ಸೌಹಾರ್ದ ಸಂಗಮ, ಮದನೀಯಮ್ ಕಾರ್ಯಕ್ರಮ

Update: 2022-11-18 18:51 IST

ಮೂಡುಬಿದಿರೆ: ಬುರ್ದಾ ಫೌಂಡೇಶನ್ ವತಿಯಿಂದ ಸೌಹಾರ್ದ ಸಂಗಮ ಮತ್ತು ಮದನೀಯಮ್ ಕಾರ್ಯಕ್ರಮ ಮೂಡುಬಿದಿರೆಯ ಶಾಲಿಮಾರ್ ಹಾಲ್ ಬಳಿ ಇತ್ತೀಚೆಗೆ ನಡೆಯಿತು. 

ಬುರ್ದಾ ಫೌಂಡೇಶನ್ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕೇಮಾರು ಸಾಂದೀಪನಿ ಸಾಧಾನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಿತ್ತೂರು ಕೆಜಿಎನ್ ದ‌ಅವಾ ಕಾಲೇಜಿನ ಪ್ರಧಾನ ಉಪನ್ಯಾಸಕ ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್ ಸಂದೇಶ ಭಾಷಣ ಮಾಡಿದರು. ಚೇತನ್ ಕುಮಾರ್ ಶೆಟ್ಟಿ ವಕೀಲರು ಮೂಡುಬಿದಿರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಗ್ರಿಬ್ ನಮಾಝ್ ಬಳಿಕ ಮೌಲಾನ ಫಾಝಿಲ್ ರಝ್ವಿ ಕಾವಳಕಟ್ಟೆ ಅಧ್ಯಕ್ಷತೆಯಲ್ಲಿ ಮದನೀಯಮ್ ಕಾರ್ಯಕ್ರಮ ನಡೆಯಿತು. ಅಬ್ದುಲ್ಲತೀಫ್ ಸಖಾಫಿ ಕಾಂದಪುರಂ ಕಾರ್ಯಕ್ರಮ ನಡೆಸಿಕೊಟ್ಟರು. 

ಮುತ್ತಲಿಬ್ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Similar News