‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

2023ರ ಜನವರಿ 31ರವರೆಗೆ ಆ್ಯಂಟಿಕ್ ಬ್ರೈಡಲ್ ಫೆಸ್ಟಿವಲ್

Update: 2022-11-18 16:39 GMT

ಮಂಗಳೂರು, ನ.18: ನಗರದ ಕಂಕನಾಡಿ ಬೈಪಾಸ್ ರಸ್ತೆಯ ಬಳಿಯಿರುವ ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ ತನ್ನ ದಶಮಾನೋತ್ಸವ ಆಚರಣೆಯ ಪ್ರಯುಕ್ತ ಆರಂಭಿಸಲಾಗಿದ್ದ ಲಕ್ಕಿ ಡ್ರಾ ಯೋಜನೆಯ ಅಕ್ಟೋಬರ್ ತಿಂಗಳ ವಿಜೇತ ಗ್ರಾಹಕರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನ ಮಳಿಗೆಯಲ್ಲಿ ನಡೆಯಿತು.

ಪ್ರತೀ ದಿನ 8 ಗ್ರಾಹಕರಿಗೆ ತಲಾ ಒಂದು ಕುಕ್ಕರ್‌ನಂತೆ 248 ಗ್ರಾಹಕರಿಗೆ ಕುಕ್ಕರ್‌ಗಳು, ವಾರದಲ್ಲಿ ತಲಾ ಮೂವರಿಗೆ ಫ್ಯಾನ್/ ಮಿಕ್ಸರ್‌ನಂತೆ 12 ಮಂದಿಗೆ ಫ್ಯಾನ್ ಮತ್ತು ಮಿಕ್ಸರ್ ಗ್ರೈಂಡರ್, ಮಾಸಿಕ 3 ಬ್ರಾಂಡ್‌ನ ವಾಶಿಂಗ್ ಮೆಶಿನ್/ಟಿವಿ/ಫ್ರಿಡ್ಜ್ ಪೈಕಿ  ಮೂವರಿಗೆ ವಾಶಿಂಗ್ ಮೆಶಿನ್ ವಿತರಿಸಲಾಯಿತು.

ಅಕ್ಟೋಬರ್ ತಿಂಗಳ ವಾಶಿಂಗ್ ಮೆಶಿನ್‌ನ್ನು ಲಕ್ಕಿಡ್ರಾ ವಿಜೇತ ಗ್ರಾಹಕರಾದ ಮುಹಮ್ಮದ್ ಇಕ್ಬಾಲ್, ರಫೀಕ್, ಮುಹಮ್ಮದ್ ಇಕ್ಬಾಲ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಬ್ರಾಂಚ್ ಮ್ಯಾನೇಜರ್ ಅಬ್ದುಲ್ ಸತ್ತಾರ್, ಸೀನಿಯರ್ ಮ್ಯಾನೇಜರ್ ಕೆ.ಎಸ್. ಮುಸ್ತಫಾ ಕಕ್ಕಿಂಜೆ, ಅಜ್ಮಾಲ್, ಇಲ್ಯಾಸ್. ದಿನೇಶ್, ನಝೀರ್ ಉಪಸ್ಥಿತರಿದ್ದರು.

*‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ನ ದಶಮಾನೋತ್ಸವದ ಪ್ರಯುಕ್ತ ಆರಂಭಿಸಲಾದ ‘ಆ್ಯಂಟಿಕ್ ಬ್ರೈಡಲ್ ಫೆಸ್ಟಿವಲ್’ (ಮದುಮಗಳ ವಿಶೇಷ ಆಭರಣ ಹಬ್ಬ) 2023ರ ಜನವರಿ 31ರವರೆಗೆ ನಡೆಯಲಿದೆ. 2,000 ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಖರೀದಿಗೆ  ಲಕ್ಕಿ ಡ್ರಾ ಕೂಪನ್‌ಗಳು ದೊರೆಯಲಿದೆ. ಬ್ರೈಡಲ್ ಖರೀದಿಗೆ ಹೆಚ್ಚಿನ ಕೂಪನ್‌ಗಳು ದೊರೆಯುತ್ತವೆ. ಪ್ರತೀ ದಿನ 8 ಲಕ್ಕಿ ಡ್ರಾ ವಿಜೇತರಿಗೆ 8 ಕುಕ್ಕರ್, ವಾರದ 3 ಲಕ್ಕಿ ಡ್ರಾ ವಿಜೇತರಿಗೆ ಮಿಕ್ಸಿ, ಫ್ಯಾನ್, ತಿಂಗಳ 3 ಲಕ್ಕಿ ಡ್ರಾ ವಿಜೇತರಿಗೆ ಫ್ರಿಡ್ಜ್, ಟಿವಿ, ವಾಶಿಂಗ್ ಮೆಶಿನ್ ಹಾಗೂ ಕೊನೆಯ ಬಂಪರ್ ಡ್ರಾ ವಿಜೇತರಿಗೆ (2023ರ ಫೆಬ್ರವರಿ 1) ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಕಾರು ನೀಡಲಾಗುವುದು.

ಮಂಗಳೂರು, ಸುರತ್ಕಲ್ ಮತ್ತು ಉಡುಪಿ ಶೋರೂಂಗಳಲ್ಲಿ ಆ್ಯಂಟಿಕ್ ಬ್ರೈಡಲ್ ಫೆಸ್ಟಿವಲ್ ವೇಳೆ ಖರೀದಿಸಲಾಗುವ ಡೈಮಂಡ್ ಕ್ಯಾರೆಟ್ ಮೇಲೆ 8,000 ರೂ. ಕೊಡುಗೆ, ಚಿನ್ನಾಭರಣ ಗೋಲ್ಡ್ ಮೇಕಿಂಗ್ ಚಾರ್ಜ್‌ನಲ್ಲಿ ಶೇ.50ರವರೆಗೆ ರಿಯಾಯಿತಿ ದರ ಕೂಡ ನೀಡಲಾಗುವುದು.  ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಕಾಂಟೆಂಪರರಿ ಬ್ರೈಡಲ್ ಕಲೆಕ್ಷನ್‌ಗಳ ಜತೆಗೆ  ಅಪಾರ ಶ್ರೇಣಿಯ ನವೀನ ವಿನ್ಯಾಸ ಹಾಗೂ ನೂತನ ಟ್ರೆಂಡ್ಸ್‌ನ ಪ್ರೀಮಿಯಂ ಆ್ಯಂಟಿಕ್ ಜ್ಲುವೆಲ್ಲರ್ಸ್‌ ಸಂಗ್ರಹ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.

Similar News