×
Ad

‘ಆಪ್ತಸಮಲೋಚಕರಾಗಿ ಶಿಕ್ಷಕರು’ ಕುರಿತ ಮಾಹಿತಿ ಕಾರ್ಯಾಗಾರ

Update: 2022-11-20 20:01 IST

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಚೈಲ್ಡ್‌ಲೈನ್ -1098, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ರೋಟರಿ ಉಡುಪಿ ಹಾಗೂ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಮಕ್ಕಳ ಮಾರ್ಗದರ್ಶನಕ್ಕಾಗಿ ಆಪ್ತ ಸಮಲೋಚಕರಾಗಿ ಶಿಕ್ಷಕರು ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾ ಗಾರವನ್ನು ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಉದ್ಘಾಟಿಸಿ, ಪ್ರಮಾಣ ವಚನ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಡಿಡಿಪಿಐ ಶಿವರಾಜ್, ಉಡುಪಿ ಡಯಟ್ ಉಪಪ್ರಾಂಶುಪಾಲ ಅಶೋಕ್ ಕಾಮತ್,  ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇ ಗೌಡ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಹಾಗೂ ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಆಪ್ತಸಮಲೋಚಕಿ ಪದ್ಮ ರಾಘವೇಂದ್ರ ಪ್ರಾರ್ಥಿಸಿದರು. ರೋಟರಿ ಕಾರ್ಯದರ್ಶಿ ಗುರುರಾಜ್ ಭಟ್ ಸ್ವಾಗತಿಸಿದರು. ಮಕ್ಕಳ ಸಹಾಯವಾಣಿ ೧೦೯೮ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮನಃಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ದಾದಿಯರಾದ ಪ್ರಮೀಳಾ ಡಿಸೋಜ ಮತ್ತು ಶೈಲ ಡಿಕೋಸ್ಟಾ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಶೋಷಣೆ, ಗುರುತಿಸುವಿಕೆ, ಮಕ್ಕಳ ಶೋಷಣೆಗೆ ಮನೋ ಸಾಮಾಜಿಕ ಕಾರಣಗಳು ಮತ್ತು ಶೋಷಣೆಯ ದೀರ್ಘ ಕಾಲಿಕ ಪರಿಣಾಮಗಳು, ಆಪ್ತ ಸಲಹೆಗಾರರಾಗಿ ಶಿಕ್ಷಕರು, ಕಲಿಕ ತೊಂದರೆ ಮತ್ತು ಕಾರಣಗಳು, ಹದಿಹರೆಯದವರ ವರ್ತನಾ ಸಮಸ್ಯೆಗಳು, ಮೊಬೈಲ್ ಮತ್ತು ಅಂತರ್ಜಾಲದ ಸದ್ಬಳಕೆ, ಬೆಳವಣಿಗೆಯ ತೊಂದರೆಗಳು ಮತ್ತು ಗುರುತಿಸುವಿಕೆ, ಶಿಕ್ಷಕರಲ್ಲಿ ಒತ್ತಡ ನಿರ್ವಹಣೆ, ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

Similar News