×
Ad

ಮಂಗಳೂರು | ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣದ ಹಿಂದಿರುವ ಕಾಣದ ಕೈಗಳಿಗೂ ಬೇಡಿ ತೊಡಿಸಿ: ಯು.ಟಿ.ಖಾದರ್

Update: 2022-11-21 15:49 IST

ಮಂಗಳೂರು, ನ.21: ನಗರ ಹೊರವಲಯದ ಪಂಪ್ ವೆಲ್ ಸಮೀಪದ ನಾಗುರಿಯಲ್ಲಿ ಶನಿವಾರ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಗಳೂರು ಶಾಸಕ, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಈ ಸಂಬಂಧ ತಪ್ಪಿತಸ್ಥ ರನ್ನು ಬಂದಿಸುವುದರ ಜೊತೆಗೆ ಅದರ ಹಿಂದಿರುವ ಕಾಣದ ಕೈಗಳಿಗೂ ಸರಕಾರ ಬೇಡಿ ತೋಡಿಸಬೇಕು. ಈ ಮೂಲಕ ಮಂಗಳೂರಿನ ನಾಗರಿಕರಲ್ಲಿರುವ ಭಯ ಮತ್ತು ಗೊಂದಲದ ವಾತಾವರಣವನ್ನ ಸರಕಾರ ದೂರ ಮಾಡಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ.

Similar News