ಟಿಕೆಟ್ ರಹಿತ ಪ್ರಯಾಣ: 7.1 ಲಕ್ಷ ರೂ. ದಂಡ ವಸೂಲಿ ಮಾಡಿದ ಬಿಎಂಟಿಸಿ

Update: 2022-11-22 15:35 GMT

ಬೆಂಗಳೂರು, ನ.22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್‍ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಸೇರಿ ವಿವಿಧ ಪ್ರಕರಣಗಳಲ್ಲಿ ಅಕ್ಟೋಬರ್ ನಲ್ಲಿ 3675 ಪ್ರಯಾಣಿಕರಿಂದ 7.1 ಲಕ್ಷ ರೂ.ದಂಡ ಸಂಗ್ರಹಿಸಲಾಗಿದೆ. 

ಬಸ್‍ನಲ್ಲಿ ಸಂಸ್ಥೆಯ ಸಾರಿಗೆ ಆದಾಯ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆಯ ತನಿಖಾ ತಂಡ ಕಳೆದ ತಿಂಗಳು ನಗರದಾದ್ಯಂತ 18,079 ಟ್ರಿಪ್‍ಗಳಲ್ಲಿ ತಪಾಸಣೆ ನಡೆಸಿತ್ತು. ಇದರಲ್ಲಿ 3,498 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಗೆ ಒಟ್ಟು 6.92 ಲಕ್ಷ ರೂ.ದಂಡ ವಿಧಿಸಿದೆ. 

ಜತೆಗೆ ಅ ಬಸ್‍ಗಳಲ್ಲಿ ಕರ್ತವ್ಯ ನಿರ್ಲಕ್ಷ್ಯ ಆಧಾರದ ಮೇಲೆ ನಿರ್ವಾಹಕರುಗಳ ವಿರುದ್ಧ 1,680 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಮಹಿಳೆಯರಿಗಾಗಿ ಮೀಸಲಿರಿಸಿದ್ದ ಆಸನಗಳಲ್ಲಿ ಕುಳಿತಿದ್ದ 177 ಪುರುಷ ಪ್ರಯಾಣಿಕರಿಗೆ 17,700 ರೂ.ದಂಡ ವಿಧಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ. 

Similar News