​ಉಕ್ರೇನ್ ನ ಯುದ್ಧಾಪರಾಧ ಆರೋಪದ ಬಗ್ಗೆ ನಿಗಾ: ಅಮೆರಿಕ

Update: 2022-11-22 17:30 GMT

ವಾಷಿಂಗ್ಟನ್, ನ.22: ಉಕ್ರೇನ್ ಸೇನೆ ಸೆರೆಸಿಕ್ಕಿದ ರಶ್ಯದ ಯೋಧರನ್ನು ಸಾಮೂಹಿಕವಾಗಿ ಗಲ್ಲಿಗೇರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಂತೆಯೇ, ಈ ಆರೋಪದ ಬಗ್ಗೆ ಸೂಕ್ಷ್ಮವಾಗಿ ನಿಗಾ ವಹಿಸಲಾಗುತ್ತಿದೆ ಎಂದು ಅಮೆರಿಕ ಹೇಳಿದೆ. 

ಯುದ್ಧಾಪರಾಧ ಎಸಗಿರುವವರು ಯಾರೇ ಆದರೂ ಅದರ ಪರಿಣಾಮ ಎದುರಿಸಲೇಬೇಕಾಗುತ್ತದೆ ಎಂದು ಜಾಗತಿಕ ಅಪರಾಧ ನ್ಯಾಯಕ್ಕಾಗಿ ಅಮೆರಿಕದ ರಾಯಭಾರಿ ಬೆತ್ವಾನ್ ಶಹಾಕ್ ಹೇಳಿದ್ದಾರೆ.

ಯುದ್ಧದ ಕಾನೂನುಗಳು ಎಲ್ಲಾ ಪಕ್ಷದವರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂಬುದನ್ನು ಒತ್ತಿ ಹೇಳುವ  ಅಗತ್ಯವಿದೆ. ಆಕ್ರಮಣ ಮಾಡಿದ ದೇಶ ಮತ್ತು ರಕ್ಷಿಸಿಕೊಳ್ಳುವ ದೇಶ ಎರಡೂ ಅಂತರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರಬೇಕು ಅಥವಾ ಪರಿಣಾಮಗಳನ್ನು ಎದುರಿಸಬೇಕು ಎಂದವರು ಹೇಳಿದ್ದಾರೆ.

Similar News