ಮಹಾರಾಷ್ಟ್ರ: ನಾಸಿಕ್ ಜಿಲ್ಲೆಯಲ್ಲಿ 3.6 ತೀವ್ರತೆಯ ಭೂಕಂಪ

Update: 2022-11-23 01:50 GMT

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಬುಧವಾರ ನಸುಕಿನಲ್ಲಿ 3.6 ತೀವ್ರತೆಯ ಭೂಕಂಪ (earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ (National Center for Seismology -NCS)  ಹೇಳಿದೆ.

ಮುಂಜಾನೆ 4 ಗಂಟೆ ಸುಮಾರಿಗೆ ಅಕ್ಷಾಂಶ 19.95 ಡಿಗ್ರಿ ಉತ್ತರ ಮತ್ತು ರೇಖಾಂಶ 72.94 ಡಿಗ್ರಿ ಪೂರ್ವಕ್ಕೆ ಈ ಭೂಕಂಪ, ನೆಲಮಟ್ಟದಿಂದ ಸುಮಾರು ಐದು ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಎನ್‍ಸಿಎಸ್ ಸ್ಪಷ್ಟಪಡಿಸಿದೆ.

ನಾಸಿಕ್‍ನಿಂದ 89 ಕಿಲೋಮೀಟರ್ ಪಶ್ಚಿಮದಲ್ಲಿ ಭೂಕಂಪ ಸಂಭವಿಸಿದೆ. ಅದರೆ ಯಾವುದೇ ಸಾವು ನೋವು ಅಥವಾ ಆಸ್ತಿ ಪಾಸ್ತಿ ನಷ್ಟದ ಬಗ್ಗೆ ವಿವರಗಳು ತಿಳಿದು ಬಂದಿಲ್ಲ.

ಮಂಗಳವಾರ ಲಡಾಖ್‍ನ ಕಾರ್ಗಿಲ್ ಜಿಲ್ಲೆಯಲ್ಲಿ 4.3 ತೀವ್ರತೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ಕೇಂದ್ರ ಕಾರ್ಗಿಲ್‍ನಿಂದ ಉತ್ತರಕ್ಕೆ 191 ಕಿಲೋಮೀಟರ್ ದೂರದಲ್ಲಿತ್ತು. ಈ ಬಗ್ಗೆ hindustantimes.com ವರದಿ ಮಾಡಿದೆ.

Similar News