ಕೊಂಕಣಿ-ಬ್ಯಾರಿ ಅಕಾಡಮಿಯ ಜಂಟಿ ಆಶ್ರಯದಲ್ಲಿ ಬಹುಭಾಷಾ ಕವಿಗೋಷ್ಠಿ

Update: 2022-11-24 12:56 GMT

ಮಂಗಳೂರು, ನ.24: ಭಾಷೆಗಳನ್ನು ಉಳಿಸಿದರೆ ಮಾತ್ರ ಭಾರತೀಯ ರಾಷ್ಟ್ರೀಯ ಏಕತೆಯನ್ನು ಎಲ್ಲಾ ಮುಂದಿನ ಪೀಳಿಗೆಗೆ ಕೊಡಲು ಸಾಧ್ಯವಾದೀತು ಎಂದು ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಹೇಳಿದರು.

ರಾಷ್ಟ್ರೀಯ ಐಕ್ಯತಾ ದಿನಾಚರಣೆಯ ಅಂಗವಾಗಿ ಕೊಂಕಣಿ ಮತ್ತು ಬ್ಯಾರಿ ಸಾಹಿತ್ಯ ಅಕಾಡಮಿಗಳ ಜಂಟಿ ಆಶ್ರಯದಲ್ಲಿ ಕೊಂಕಣಿ ಅಕಾಡಮಿಯ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೊಂಕಣಿ,ತುಳು, ಬ್ಯಾರಿ, ಹವ್ಯಕ, ಹಿಂದಿ, ಕನ್ನಡ ಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೊಸ್ಸಿ ಪಿಂಟೊ ಕಿನ್ನಿಗೋಳಿ, ಅರವಿಂದ್ ಶಾನಭಾಗ ಬಾಳರಿ, ಜೂಲಿಯೆಟ್ ಫೆರ್ನಾಂಡಿಸ್ ಮಂಗಳೂರು ಕೊಂಕಣಿಯಲ್ಲಿ, ಮುಹಮ್ಮದ್ ಬಡ್ಡೂರು, ಅನುರಾಧಾ ರಾಜೀವ್, ರೇಮಂಡ್ ಡಿಕುನ್ಹಾ ತಾಕೊಡೆ ತುಳುವಿನಲ್ಲಿ, ಹಂಝ ಮಲಾರ್, ಎಡ್ವರ್ಡ್  ಲೋಬೊ ತೊಕ್ಕೊಟ್ಟು, ಸಿಹಾನ ಬಿಎಂ ಬ್ಯಾರಿ ಭಾಷೆಯಲ್ಲಿ, ಮಹೇಶ್ ಆರ್. ನಾಯಕ್, ಪೂರ್ಣಿಮಾ ಸುರೇಶ್ ನಾಯಕ್, ನವೀನ್ ಡಿಸೋಜ ಕನ್ನಡದಲ್ಲಿ, ಡಾ.ಸುರೇಶ ನೆಗಳಗುಳಿ, ಗುಣಾಜೆ ರಾಮಚಂದ್ರ ಭಟ್ ಹವ್ಯಕದಲ್ಲಿ, ಡಾ.ಪರಶುರಾಮ ಮಾಳಗೆ, ಅರುಣ್ ಜಿ. ಶೇಟ್ ಹಿಂದಿಯಲ್ಲಿ ಕವನ ವಾಚಿಸಿದರು.

ರಾಷ್ಟ್ರೀಯ ಪ್ರಶಸ್ತಿ ವಿಜೇತ ರಮೊನಾ ಇವಟ್ ಪಿರೇರಾ ನೃತ್ಯ ಪ್ರದರ್ಶಿಸಿದರು. ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಮಾರ್ಸೆಲ್ ಡಿಸೋಜ, ಶಂಶೀರ್ ಬುಡೋಳಿ, ಸತ್ಯಾವತಿ, ಹಾರೂನ್ ರಶೀದ್ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು.

ಕೊಂಕಣಿ ಹಾಗೂ ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್ ಸ್ವಾಗತಿಸಿದರು.

Similar News