ಹೆಜಮಾಡಿಯಲ್ಲಿ ಎನ್.ಎಚ್.ಪ್ರಾಧಿಕಾರದಿಂದ ಸುಲಿಗೆ: ಜೆಡಿಎಸ್ ಆರೋಪ

Update: 2022-11-26 15:37 GMT

ಉಡುಪಿ : ಸುರತ್ಕಲ್ ಟೋಲ್‌ಗೇಟ್‌ನ್ನು ಮುಚ್ಚಿ, ಅಲ್ಲಿನ ದರವನ್ನು ಪೂರ್ತಿಯಾಗಿ ಹೆಜಮಾಡಿಯ ಟೋಲ್ ಶುಲ್ಕಕ್ಕೆ ಸೇರಿಸಿ ಜನರಿಂದ ಸುಲಿಗೆ ನಡೆಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಆರೋಪಿಸಿದ್ದಾರೆ.

ಇದು ಕೇಂದ್ರ ಸರಕಾರವಾಗಿದ್ದು, ಕರಾವಳಿಯ ಎರಡು ಜಿಲ್ಲೆಗಳ ಸಂಸದರು  ಜನತೆಗೆ ಎಸಗಿದ ದ್ರೋಹ ಇದಾಗಿದೆ ಎಂದವರು ಟೀಕಿಸಿದ್ದಾರೆ. 

ಟೋಲ್ ವಿಲೀನದ ಪರಿಣಾಮ ದುಬಾರಿ ಸುಂಕ ನೀಡುವ ಪರಿಸ್ಥಿತಿ ಎರಡೂ ಜಿಲ್ಲೆಗಳ ಜನರಿಗೆ ಬಂದಿರುವುದು ದುರದೃಷ್ಟಕರ. ಜನರ ಭಾವನೆ ಕಷ್ಟ ಸುಖಗಳಿಗೆ ಸರಕಾರ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ  ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದರು.

ಹಿಂದೆಯೂ ಟೋಲ್ ರದ್ಧತಿ ಹೋರಾಟದಲ್ಲಿ ನಾವು ಪಾಲ್ಗೊಂಡಿದ್ದೆವು. ಮುಂದಿನ ದಿನಗಳಲ್ಲಿ ಜನತಾದಳ (ಜಾತ್ಯತೀತ )ಪಕ್ಷದ ವತಿಯಿಂದ ನಮ್ಮದೇ ಆದ ರೀತಿಯಲ್ಲಿ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಯೋಗೀಶ್ ವಿ ಶೆಟ್ಟಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ. 

Similar News