ಯೆನೆಪೊಯದಲ್ಲಿ ಅಂತರಾಷ್ಟ್ರೀಯ ಪುರುಷರ ದಿನಾಚರಣೆ

Update: 2022-11-27 13:16 GMT

ಕೊಣಾಜೆ: ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವೈ.ಪಿ.ಸಿ.ಆರ್.ಸಿ), ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ ಭಾಗವಾದ ಜೆಂಡರ್ ಸೆನ್ಸಿಟೈಸೇಶನ್ ಸೆಲ್ ವತಿಯಿಂದ ಅಂತರ ರಾಷ್ಟ್ರೀಯ ಪುರುಷರ ದಿನಾಚರಣೆ ನಡೆಯಿತು.

ಪಿಎ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮತ್ತು ಸಾಧನಾ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸರ್ಫ್ರಾಜ್ ಜೆ ಹಾಸಿಮ್ ಅವರು ಮಾತನಾಡಿ,  ಪ್ರತಿ ವರ್ಷ ನ.19ರಂದು, ಪ್ರಪಂಚದಾದ್ಯಂತ ಪುರುಷರು ತಮ್ಮ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಮತ್ತು ಆರ್ಥಿಕ ಸಾಧನೆಗಳನ್ನು ಗೌರವಿಸಲು ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ ಎಂದರು.

ವೈ.ಪಿ.ಸಿ.ಆರ್.ಸಿಯ ಸಹಾಯಕ ಪ್ರಾಧ್ಯಾಪಕರಾದ  ಸಂಧ್ಯಾ ವಿ ಅವರು ಪುರುಷರ ದಿನದ  ಮಹತ್ವದ ಬಗ್ಗೆ ತಿಳಿಸಿದರು. ಡಾ. ಸಿಂಧು ಪ್ರಿಯಾ ಈ. ಎಸ್, ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥೆ, ವೈ.ಪಿ.ಸಿ.ಆರ್.ಸಿ, ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಜಿ.ಎಸ್.ಸಿ, ವೈ.ಪಿ.ಸಿ.ಆರ್.ಸಿ ಸದಸ್ಯೆ ರಜಿಕಾ ವಂದಿಸಿದರು.

ಜೆಂಡರ್ ಸೆನ್ಸಿಟೈಸೇಶನ್ ಸೆಲ್  ಇದರ ವತಿಯಿಂದ ಪುರುಷ ರೋಲ್ ಮಾಡೆಲ್"  ಪರಿಕಲ್ಪನೆಯೊಂದಿಗೆ "ರಾಂಪ್ ವಾಕ್". ಎರಡನೆಯದಾಗಿ "ಹಳೆಯ ಸ್ನೇಹಿತರ ಒಕ್ಕೂಟದ" ಪರಿಕಲ್ಪನೆಯೊಂದಿಗೆ "ಕೊಲಾಜ್ ತಯಾರಿಕೆ". ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Similar News