ಎನ್ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ ಸಭೆ

Update: 2022-11-27 17:06 GMT

ಮಂಗಳೂರು, ನ.27:  ಎನ್ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ ಸಭೆ-'ಚಿಂತನ ಮಂಥನ' ಕಾರ್ಯಕ್ರಮ ನಗರದ ಇಂದಿರಾ ಭವನದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎನ್ ಎಸ್ ಯು ಐ ರಾಜ್ಯ ಉಸ್ತುವಾರಿ ಇನಾಯತ್ ಅಲಿ ಅವರು, ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಜಿಲ್ಲೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ದಕ್ಷಿಣ ಕನ್ನಡ ಜಿಲ್ಲೆ ಶಾಂತಿಪ್ರಿಯರ ಹಾಗೂ ಸೌಹಾರ್ದತೆಯ ನಾಡು. ಕೆಲವೇ ಕೆಲವು ಕೋಮುವಾದಿ ಮನಸ್ಥಿತರಿಂದ ಇಂದು ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವಂತಹ ಕೆಲಸಗಳು ನಡೆಯುತ್ತಿವೆ. ವಿದ್ಯಾರ್ಥಿ ಶಕ್ತಿ ನಾಡಿನ ಭವಿಷ್ಯ. ಎನ್ ಎಸ್ ಯು ಐ ಅನ್ನು ಬಲಿಷ್ಠವಾಗಿ ಸಂಘಟಿಸುವ ಮೂಲಕ ಕೋಮುವಾದವನ್ನು ಹಿಮ್ಮೆಟ್ಟಿಸಿ ಸಾಮರಸ್ಯಪೂರ್ಣ ಜಿಲ್ಲೆ ಕಟ್ಟುವಲ್ಲಿ ವಿದ್ಯಾರ್ಥಿ ಮಿತ್ರರು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ರಾಜ್ಯ ಪದಾಧಿಕಾರಿಗಳಾದ  ಫಾರೂಕ್ ಬಯಾಬೆ, ಸುಹಾನ್ ಆಳ್ವ, ಅನ್ವಿತ್ ಕಟೀಲ್, ಭರತ್ ರಾಮ್,  ಆಶಿತ್ ಜಿ. ಪೆರೇರಾ, ವಿದ್ಯಾರ್ಥಿ ಮುಖಂಡರಾದ ನಿಖಿಲ್ ಪೂಜಾರಿ, ಪ್ರತೀಶ್ ಭಂಡಾರಿ, ಸಾಹಿಲ್ ಎ.ಕೆ., ಮುಹಮ್ಮದ್ ತಹ್ಷೀರ್ , ಅಮಾನ್ ಪೂಜಾರಿ, ಕೀರ್ತನ್ ಗೌಡ, ಅಬ್ದುಲ್ ರಹ್ಮಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Similar News