ಪ್ರಾಕೃತ, ಪಾಳಿ ಭಾಷೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಿಲ್ಲ: ಹಂಪನಾ ಬೇಸರ

Update: 2022-11-28 15:53 GMT

ಬೆಂಗಳೂರು, ನ.28: ಸಂಸ್ಕೃತ ಸಾಹಿತ್ಯದ ಕೃತಿಗಳ ಬಗ್ಗೆ ದೇಶದಲ್ಲಿ ಸಂಶೋಧನೆಗಳು ನಡೆದಿದ್ದು, ಸಂಸ್ಕೃತದಷ್ಟೇ ಪ್ರಾಚೀನವಾದಪ್ರಾಕೃತ ಮತ್ತು ಪಾಳಿ ಭಾಷೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.

ಸೋಮವಾರ ನಗರ ಕುವೆಂಪು ಸಭಾಂಗಣದಲ್ಲಿ ಸಪ್ನ ಬುಕ್ ಹೌಸ್, ಕನ್ನಡ ಜನಶಕ್ತಿ ಕೇಂದ್ರ ಹಾಗೂ  ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ. ಎಚ್. ಟಿ.ಪೋತೆ ಅವರ ಪ್ರಶಸ್ತಿ ಪುರಸ್ಕೃತ ನಾಲ್ಕು ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚೀನ ಭಾಷೆಗಳಾದ ಪ್ರಾಕೃತ ಹಾಗೂ ಪಾಳಿ ಭಾಷೆಗಳು ಕಷ್ಟವಾಗಿರುವುದರಿಂದ ಸಂಶೋಧನೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ಆದರೆ ಮಲ್ಲೇಪುರಂ ವೆಂಕಟೇಶ್ ಅವರು ಪಾಳಿ ಭಾಷೆ ಮುಂದೆ ಬಂದಿದ್ದಾರೆ. ಪಾಲಿಯಲ್ಲಿ ನಿಘಂಟು ಬರೆದಿದ್ದಾರೆ ಎಂದು ತಿಳಿಸಿದರು. 

ಎಚ್.ಟಿ. ಪೋತೆ ಅವರು ಸಾಹಿತ್ಯ ಜಾನಪದ, ದಲಿತ ಸಾಹಿತ್ಯ ಸೀಮಿತವಾಗಿರದೆ, ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಬರೆದಿದ್ದಾರೆ. ಸಾಹು ಮಹರಾಜರ ಮೇಲೆ ಮೈಸೂರು ಒಡೆಯರು ಪ್ರಭಾವ ಬೀರಿರುವ ಬಗ್ಗೆಯು ಅವರು ಬರೆದಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಸಾಹಿತಿ ಮಲ್ಲೇಪುರಂ ವೆಂಕಟೇಶ್, ಎಚ್.ಟಿ. ಪೋತೆ ಮತ್ತಿತರರು ಉಪಸ್ಥಿತರಿದ್ದರು.

Similar News