ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ; ಬಜರಂಗದಳ ನಿರಾಕರಣೆಗೆ ಸಿಪಿಎಂ ಖಂಡನೆ

Update: 2022-11-29 04:39 GMT

ಬೆಂಗಳೂರು, ನ. 28: ವಿ.ವಿ.ಪುರಂ ಸುಬ್ರಹ್ಮಣ್ಯಸ್ವ್ವಾಮಿ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡುವುದನ್ನು ಬಜರಂಗದಳದವರು ವಿರೋಧಿಸಿರುವ ಕ್ರಮವನ್ನು ಅತಿರೇಕದ ವರ್ತನೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯೆಂದು ಸಿಪಿಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ನ.26ರಂದು ಸಂವಿಧಾನ ಸಮರ್ಪಣಾ ದಿನವನ್ನು ದೇಶದಾದ್ಯಂತ ಆಚರಿಸಿದ್ದೇವೆ. ದೇಶದ ಬಹುತ್ವ ಸಂಸ್ಕøತಿಗೆ ಕೂಡಿ ಬಾಳುವ ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ಹಿಂದುತ್ವವಾದಿ ಸಂಘಟನೆಗಳ ಅತಿರೇಕ ವರ್ತನೆಯನ್ನು ಹಾಗೂ ವ್ಯಾಪಾರಿಗಳನ್ನು ಧರ್ಮ, ಕೋಮು ಆಧಾರದಲ್ಲಿ ವಿಭಜಿಸುವ ಪ್ರಯತ್ನಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದೆಂದು ಅವರು ಆಗ್ರಹಿಸಿದ್ದಾರೆ.

ನೆಲದ ಕಾನೂನು ಮತ್ತು ಸೌಹಾರ್ದ ಪರಂಪರೆಗೆ ವಿರುದ್ಧವಾಗಿ ನಡೆಯುವವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತ(ಡಿಪಿಸಿ)ರಿಗೆ ಸಿಪಿಎಂ ಪಕ್ಷ ಮನವಿ ಸಲ್ಲಿಸಿದೆ. ಮನವಿ ಪತ್ರ ಸ್ವೀಕರಿಸಿದ ಡಿಸಿಪಿ ನೆಲದ ಕಾನೂನನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಇದು ನಮ್ಮ ಇಲಾಖೆಯ ಕರ್ತವ್ಯವಾಗಿದೆ ಎಂದು ಭರವಸೆಯನ್ನು ನೀಡಿದ್ದಾರೆ ಎಂದು ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News