ರವೀಂದ್ರನಾಥ್‌ನಂತಹವರು ಶಿಕ್ಷಕ ಸಮುದಾಯಕ್ಕೆ ಕಳಂಕ: ದಿನೇಶ್ ಗುಂಡೂರಾವ್

ವಿದ್ಯಾರ್ಥಿಯನ್ನು 'ಕಸಬ್' ಎಂದು ಕರೆದ ಪ್ರಾಧ್ಯಾಪಕ

Update: 2022-11-29 07:03 GMT

ಬೆಂಗಳೂರು: ಉಡುಪಿಯ ಎಂಐಟಿ (MIT) ಕಾಲೇಜ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಅಲ್ಲಿನ ಪ್ರಾಧ್ಯಾಪಕ ರವೀಂದ್ರನಾಥ್ 'ಕಸಬ್' ಹಾಗೂ 'ಟೆರೆರಿಸ್ಟ್' ಎಂದಿದ್ದಾರೆ.‌ ಧರ್ಮಾಂಧತೆಯ ಅಮಲು ತುಂಬಿಕೊಂಡಿರುವ ಈ ಪ್ರಾಧ್ಯಾಪಕ ವಿದ್ಯಾರ್ಥಿಗಳಿಗೆ ಏನು ಶಿಕ್ಷಣ ಕೊಡಬಲ್ಲ.? ಶಿಕ್ಷಕ ವೃತ್ತಿಗೆ ತನ್ನದೇ ಆದ ಘನತೆ ಗೌರವವಿದೆ. ರವೀಂದ್ರನಾಥ್‌ನಂತಹವರು ಶಿಕ್ಷಕ ಸಮುದಾಯಕ್ಕೆ ಕಳಂಕ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಶಿಕ್ಷಕರು ವಿದ್ಯಾರ್ಥಿಗಳನ್ನು ಧರ್ಮ, ಜಾತಿ, ಬಣ್ಣ ಹಾಗೂ ಭಾಷೆಯ ಆಧಾರದಲ್ಲಿ ಅವಹೇಳನ ಮಾಡುವುದು ಅತ್ಯಂತ ಕೆಟ್ಟ ನಡೆ. ಸಮಾಜ ತಿದ್ದುವ ಅತಿ ದೊಡ್ಡ ಜವಬ್ದಾರಿ ಶಿಕ್ಷಕರ ಮೇಲಿದೆ. ಆದರೆ ಉಡುಪಿಯ MIT ಕಾಲೇಜ್ ಪ್ರಾಧ್ಯಾಪಕ ರವೀಂದ್ರನಾಥ್ ಧರ್ಮದ ಆಧಾರದಲ್ಲಿ ತನ್ನ ವಿದ್ಯಾರ್ಥಿಯನ್ನು ಅಪಮಾನಿಸಿರುವುದು ಕ್ಷಮಾರ್ಹವಲ್ಲ‌ ಎಂದು ತಿಳಿಸಿದ್ದಾರೆ.

Similar News