×
Ad

ಉಡುಪಿ: ಗಣಿತ ಶಾಸ್ತ್ರದ ರಾ.ವಿಚಾರ ಸಂಕಿರಣ ಉದ್ಘಾಟನೆ

Update: 2022-11-29 19:04 IST

ಉಡುಪಿ: ಗಣಿತ ಶಾಸ್ತ್ರ, ವಿಜ್ಞಾನ ವಿಭಾಗದ ಒಂದು ಮುಖ್ಯ ಅಂಗ. ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯ ಗಳಲ್ಲಿ ಶೇ.60ರಷ್ಟು ಗಣಿತ ಶಾಸ್ತ್ರದ ಪ್ರಭಾವವಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿಯ ನಾಲ್ಕನೇ ವರ್ಷಕ್ಕೆ ಹೆಚ್ಚು ಮಹತ್ವವಿದೆ ಎಂದು ಶಿವಮೊಗ್ಗ ಕುವೆಂಪು ವಿವಿಯ ನಿವೃತ್ತ ಕುಲಪತಿಗಳಾದ ಪ್ರೊ.ಬಿ.ಎಸ್. ಶೇರಿಗಾರ್ ಹೇಳಿದ್ದಾರೆ.

ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗಣಿತ ಶಾಸ್ತ್ರ ವಿಭಾಗದ ವತಿಯಿಂದ ಗಣಿತ ಶಾಸ್ತ್ರ ವಿಷಯದ ಮೇಲೆ ಆಯೋಜಿಸಲಾದ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೇರಳದ ಕೊಚ್ಚಿನ್ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಅಂಬಟ್ ವಿಜಯಕುಮಾರ್ ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಪೂರ್ಣಪ್ರಜ್ಞ ಕಾಲೇಜಿನ ಗೌರವ ಕೋಶಾಧಿಕಾರಿ ಪ್ರಶಾಂತ್ ಹೊಳ್ಳ, ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ.ವಿನಯ್‌ ಕುಮಾರ್  ಉಪಸ್ಥಿತರಿದ್ದರು.

ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಕೇಶ್ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕ ಗೌತಮ್ ವಂದಿಸಿದರು. ವಿದ್ಯಾರ್ಥಿ ವಾಸುಕಿ ಕಾರ್ಯಕ್ರಮ ನಿರೂಪಿಸಿದರು.

Similar News