ಬೆಂಗಳೂರು: ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ATM ದೋಚಿದ್ದ ಭದ್ರತಾ ಸಿಬ್ಬಂದಿ ಬಂಧನ

Update: 2022-11-29 14:50 GMT

ಬೆಂಗಳೂರು, ನ. 29: ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ತಾನು ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದ ಎಟಿಎಂನಲ್ಲೇ ಲಕ್ಷಗಟ್ಟಲೇ ಹಣ ದೋಚಿರುವ ಆರೋಪ ಸಂಬಂಧ ವಿಲ್ಸನ್ ಗಾರ್ಡನ್ ಠಾಣಾ ಓರ್ವನನ್ನು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ದಿಪೋಂಕರ್ ನೋಮೋಸುದರ್ ಬಂಧಿತ ಆರೋಪಿಯಾಗಿದ್ದು, ಆತನಿಂದ 14.20 ಲಕ್ಷರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಕಳವು ಮಾಡಿದ ಹಣದಲ್ಲಿ ಮೊದಲು ಒಂದು ಹೋಟೆಲ್ ತೆರೆಯಲು ಯಜನೆ ಹಾಕಿಕೊಂಡಿದ್ದು, ಬಳಿಕ ಒಂದು ವರ್ಷ ದುಡಿದು ನಂತರ ಪ್ರೇಯಸಿಯನ್ನು ಮದುವೆ ಮಾಡಿಕೊಳ್ಳಲು ಯೋಜನೆ ಮಾಡಿದ್ದ. ಆದರೆ, ಈತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಾರ್ಯಾಚರಣೆ ಕೈಗೊಂಡ ವಿಲ್ಸನ್ ಗಾರ್ಡನ್ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು | ಕೇರಳ ಮೂಲದ ಯುವತಿಯ ಅತ್ಯಾಚಾರ ಆರೋಪ; ರ‍್ಯಾಪಿಡೊ ಬೈಕ್ ಸವಾರ, ಸ್ನೇಹಿತ ಬಂಧನ

Similar News