ಬಿಬಿಎಂಪಿ ಕಸದ ಲಾರಿ ಡಿಕ್ಕಿ; ಮೃತರಿಗೆ 25 ಲಕ್ಷ ರೂ. ಪರಿಹಾರ ಘೋಷಣೆ

Update: 2022-11-29 17:36 GMT

ಬೆಂಗಳೂರು, ನ. 29: ಬೈಕ್‍ಗೆ ಕಸದ ಲಾರಿ ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮೃತರ ಕುಟುಂಬಗಳಿಗೆ ಬಿಬಿಎಂಪಿ ತಲಾ 25 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದೆ ಎಂದು ವರದಿಯಾಗಿದೆ.

ಮೃತ ಮಹೇಶ್ ಮತ್ತು ಮಾರುತಿ ಕುಟುಂಬಗಳಿಗೆ ಬಿಬಿಎಂಪಿ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಸೋಮವಾರ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ಬೈಕ್‍ಗೆಬಿಬಿಎಂಪಿ ಕಸದ ಲಾರಿ ಢಿಕ್ಕಿಯಾಗಿ ನೆಲಮಂಗಲ ಮೂಲದ ಮಹೇಶ್, ಮಾರುತಿ ಮೃತಪಟ್ಟಿದ್ದರು. 

ಘಟನೆ ಖಂಡಿಸಿ ಹುಲಿಕುಂಟೆ ಗ್ರಾಮಸ್ಥರು ರಸ್ತೆ ತಡೆದು ಧರಣಿ ನಡೆಸಿ, ಮೃತದೇಹಗಳನ್ನು ಅಪಘಾತ ಸ್ಥಳದಿಂದ ತೆರವು ಮಾಡಲು ಬಿಡದೆ ಧರಣಿ ನಡೆಸಿದ್ದರು. ನಂತರ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಮೃತಪಟ್ಟ ಇಬ್ಬರಿಗೂ ತಲಾ 25 ಲಕ್ಷ ಪರಿಹಾರ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

Similar News