ವಿಶ್ವಕಪ್: ದಕ್ಷಿಣ ಕೊರಿಯಾ ಆಟಗಾರನೊಂದಿಗೆ ರೊನಾಲ್ಡೊ ಮಾತಿನ ಚಕಮಕಿ

Update: 2022-12-03 08:39 GMT

ದೋಹಾ: ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರದಂದು ನಡೆದ ಅಂತಿಮ ಗ್ರೂಪ್ ಪಂದ್ಯದಲ್ಲಿ  ಪೋರ್ಚುಗಲ್‌ ತಂಡ  2-1 ಸೋಲಿನ ಸಂದರ್ಭದಲ್ಲಿ ನನ್ನ ಬದಲಿಗೆ ಬದಲಿ ಆಟಗಾರ ಬಂದಾಗ ಮೈದಾನವನ್ನು ಬೇಗನೆ ತೊರೆಯದ ನನ್ನನ್ನು  ಟೀಕಿಸಿದ ದಕ್ಷಿಣ ಕೊರಿಯಾದ ಆಟಗಾರನೊಂದಿಗೆ ನಾನು ಮಾತಿನ ಚಕಮಕಿಯಲ್ಲಿ ತೊಡಗಿದ್ದೆ ಎಂದು ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದರು.

ಫಲಿತಾಂಶದ ಹೊರತಾಗಿಯೂ ಪೋರ್ಚುಗಲ್ ಎಚ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಮುಂದಿನ ಸುತ್ತಿಗೇರಿದೆ. ಈ ಗೆಲುವಿನೊಂದಿಗೆ ದಕ್ಷಿಣ ಕೊರಿಯಾವನ್ನು ಕೊನೆಯ 16  ಸುತ್ತಿಗೆ ತಲುಪಿದೆ.

"ಪಂದ್ಯದ 65ನೇ ನಿಮಿಷದಲ್ಲಿ  ಇದು ಸಂಭವಿಸಿತು. ಕೊರಿಯಾದ ಆಟಗಾರನು ನನಗೆ ಮೈದಾನದಿಂದ ಬೇಗನೆ ಹೊರಡಲು ಹೇಳುತ್ತಿದ್ದ.  ಹಾಗೆ ಹೇಳಲು ನಿನಗೆ ಯಾವುದೇ ಅಧಿಕಾರವಿಲ್ಲ. ಸುಮ್ಮನಿರು ಎಂದು ನಾನು ಅವನಿಗೆ ಹೇಳಿದ್ದೆ" ಎಂದು ರೊನಾಲ್ಡೊ ಸುದ್ದಿಗಾರರಿಗೆ ತಿಳಿಸಿದರು.

"ನಾನು ಸಾಕಷ್ಟು ಬೇಗನೆ ಹೋಗದಿದ್ದರೆ, ಅದನ್ನು ರೆಫರಿ ಹೇಳಬೇಕು. ಯಾವುದೇ ವಿವಾದ ಇರಬಾರದು, ಆಗ ನಮ್ಮಿಬ್ಬರಲ್ಲಿ ಮಾತಿನ ಚಕಮಕಿ ಉಂಟಾಯಿತು" ಎಂದು ರೊನಾಲ್ಡೊ ಹೇಳಿದರು.

 "ರೊನಾಲ್ಡೊ  ಕೊರಿಯಾದ ಆಟಗಾರನ ಮೇಲೆ ಕೋಪಗೊಂಡಿದ್ದರು. ಅದನ್ನು  ಎಲ್ಲರೂ ನೋಡಿದರು. ಆಟಗಾರನು ಅವರನ್ನು ಅವಮಾನಿಸಿದ್ದನು, ಅವರನ್ನು ಬೇಗ ಹೋಗು (ಪಿಚ್‌ನಿಂದ ಹೊರಹೋಗು) ಎಂದು ಹೇಳುತ್ತಿದ್ದ. ಇದು ರೊನಾಲ್ಡೊ ಕೋಪಕ್ಕೆ ಕಾರಣವಾಯಿತು’’ ಎಂದು  ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಹೇಳಿದರು.

ದಕ್ಷಿಣ ಕೊರಿಯಾದ ಮಿಡ್‌ಫೀಲ್ಡರ್ ಹ್ವಾಂಗ್ ಇನ್-ಬೀಮ್ ಈ ಘಟನೆಯನ್ನು ತಣ್ಣಗಾಗಿಸಲು ಪ್ರಯತ್ನಿಸಿದರು.

" ನಾನು ಆಗ  ತುಂಬಾ ಸುಸ್ತಾಗಿದ್ದೆ. ಆಗ ನಾನು ನೆಲವನ್ನು ನೋಡುತ್ತಿದ್ದೆ, ಆದ್ದರಿಂದ ನಾನು ಅವರನ್ನು ನೋಡಲಿಲ್ಲ ಹಾಗೂ ನನಗೆ ಹೇಳಲು ಏನೂ ಇರಲಿಲ್ಲ’’ ಎಂದು ಕೊರಿಯಾ ಆಟಗಾರ ಹೇಳಿದರು.

Similar News