ದಿಲ್ಲಿ ಮಹಾನಗರ ಪಾಲಿಕೆ ಮತದಾನ ಆರಂಭ: ಎಎಪಿಗೆ ಹೆಚ್ಚಿನ ನಿಯಂತ್ರಣ ಗುರಿ, ಬಿಜೆಪಿಗೆ ಆಡಳಿತ ಉಳಿಸಿಕೊಳ್ಳುವ ವಿಶ್ವಾಸ

Update: 2022-12-04 07:34 GMT

ಹೊಸದಿಲ್ಲಿ: ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್‌ಗೆ ರವಿವಾರ ಬೆಳಗ್ಗೆ ಮತದಾನ ಆರಂಭವಾಗಿದ್ದು, ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಕೇಂದ್ರ ವಿಷಯವಾಗಿಟ್ಟುಕೊಂಡು ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಹೆಚ್ಚಿನ ನಿಯಂತ್ರಣ ಸಾಧಿಸುವ  ಗುರಿ ಇಟ್ಟುಕೊಂಡಿದೆ. ಬಿಜೆಪಿ ತನ್ನ ಆಳ್ವಿಕೆಯನ್ನು ವಿಸ್ತರಿಸುವ ವಿಶ್ವಾಸದಲ್ಲಿದೆ, ಕಾಂಗ್ರೆಸ್ ಸ್ವಲ್ಪಮಟ್ಟಿಗೆ ಮತ್ತೆ ಗೆಲ್ಲುವ ನಿರೀಕ್ಷೆಯಲ್ಲಿದೆ.

ಸುಮಾರು 1.5 ಕೋಟಿ ಜನರು 250 ವಾರ್ಡ್‌ಗಳಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.  2011 ರಲ್ಲಿ ಪ್ರದೇಶವಾರು ರೂಪುಗೊಂಡ ಮೂರು ಎಂಸಿಡಿ ಗಳನ್ನು ಮರುಸಂಘಟಿಸಲಾಯಿತು ಹಾಗೂ  ಈ ವರ್ಷದ ಆರಂಭದಲ್ಲಿ ಬಿಜೆಪಿಯ ಕೊನೆಯ ಅವಧಿ ಮುಗಿದ ನಂತರ ವಾರ್ಡ್‌ಗಳನ್ನು ಮರುವಿನ್ಯಾಸಗೊಳಿಸಲಾಯಿತು.

ರವಿವಾರ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5.30ಕ್ಕೆ ಮತದಾನ ಕೇಂದ್ರದ ಗೇಟ್‌ಗಳನ್ನು ಮುಚ್ಚಲಾಗುವುದು, ನಂತರ ಒಳಗೆ ಇರುವವರು ಮಾತ್ರ ಮತ ಚಲಾಯಿಸಬಹುದು.

 ಮೆಟ್ರೋ ರೈಲು ಸೇವೆಗಳು ಮತದಾನದ ದಿನದಂದು ಸಾಮಾನ್ಯಕ್ಕಿಂತ ಎರಡು ಗಂಟೆಗಳ ಮುಂಚಿತವಾಗಿ 4 ಗಂಟೆಗೆ ಆರಂಭವಾಗಿವೆ. ಡಿಸೆಂಬರ್ 7 ಫಲಿತಾಂಶ ಪ್ರಕಟವಾಗಲಿದೆ.  ಅರವತ್ತೆಂಟು ಮಾದರಿ ಮತಗಟ್ಟೆಗಳು ಹಾಗೂ  ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಹಲವು ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

1,300 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಪ್ರಸಕ್ತ  ರಾಜ್ಯ ಹಾಗೂ  ಕೇಂದ್ರ ಸರಕಾರಗಳ ಮೂಲಕ ದಿಲ್ಲಿಯ ಆಡಳಿತದ ಕೆಲವು ಭಾಗಗಳನ್ನು ನಿಯಂತ್ರಿಸುತ್ತಿರುವ ಎಎಪಿ ಹಾಗೂ  ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಹೋರಾಡುತ್ತಿವೆ. ಎಎಪಿ ಉದಯವಾದಾಗಿನಿಂದ ದಿಲ್ಲಿಯಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್, ತಾಂತ್ರಿಕ ಕಾರಣಗಳಿಂದಾಗಿ ಅದರ ಮೂವರು ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಿದ್ದರಿಂದ 247 ಸ್ಥಾನಗಳಲ್ಲಿ ಹೋರಾಡುತ್ತಿದೆ.

Similar News