ಮೊದಲ ಏಕದಿನ: ಬಾಂಗ್ಲಾದೇಶ ವಿರುದ್ಧ ಭಾರತ 186 ರನ್ ಗೆ ಆಲೌಟ್

Update: 2022-12-04 09:31 GMT

ಮೀರ್ಪುರ, ಡಿ.4: ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತವು  ಕೇವಲ 186 ರನ್ ಗಳಿಸಿ ಆಲೌಟಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಆಲ್ ರೌಂಡರ್ ಶಾಕಿಬ್ ಅಲ್ ಹಸನ್(5-36) ಹಾಗೂ ಎಬಾದೋತ್  ಹುಸೈನ್(4-47)ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಭಾರತ 41.2 ಓವರ್ ಗಳಲ್ಲಿ ಆಲೌಟಾಯಿತು.

ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿದ ಕೆ.ಎಲ್ ರಾಹುಲ್ (73 ರನ್, 70 ಎಸೆತ, 5 ಬೌಂಡರಿ, 4 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ರೋಹಿತ್ ಶರ್ಮಾ 27 ರನ್, ವಿರಾಟ್ ಕೊಹ್ಲಿ 24 ಹಾಗೂ ಸುಂದರ್ 19 ರನ್ ಗಳಿಸಿದರು. ಉಳಿದವರು ವಿಫಲರಾದರು.

Similar News