MEIF ವತಿಯಿಂದ ಉಡುಪಿ ಝೋನಲ್ ಪ್ರತಿಭಾ ಸ್ಪರ್ಧೆ

Update: 2022-12-06 16:24 GMT

ಉಡುಪಿ, ಡಿ. 6: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಉಡುಪಿ ಹಾಗೂ ದ.ಕ ಜಿಲ್ಲೆ (MEIF ) ವತಿಯಿಂದ  ಉಡುಪಿ ಝೋನಲ್ ಮಟ್ಟದ ಅಂತರ್ ಶಾಲಾ  ಪ್ರತಿಭಾ ಸ್ಪರ್ಧೆ  "Talent Hunt -2022 -23" ಉದ್ಯಾವರದ MET ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಲೀಮಾ ಸಬ್ಜು  ಸಭಾಂಗಣದ ವ್ಯವಸ್ಥಾಪಕ ನಿರ್ದೇಶಕ ಹಾಜಿ ಅಬ್ದುಲ್ ಜಲೀಲ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು MEIF ಉಡುಪಿ ಝೋನಲ್ ಉಪಾಧ್ಯಕ್ಷ ಶಬೀಹ್ ಅಹ್ಮದ್ ಖಾಝಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಾಲಿಹಾತ್ ಶಿಕ್ಷಣ ಸಮೂಹ ಸಂಸ್ಥೆ ಹೂಡೆ ಇದರ ಸಂಚಾಲಕರಾದ  ಅಸ್ಲಮ್ ಹೈಕಾಡಿ ಭಾಗವಹಿಸಿದ್ದರು. MEIF ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, MEIF ಸಂಸ್ಥೆಯ ಪ್ರಸಕ್ತ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಅಬ್ದುಲ್ ರಹ್ಮಾನ್ ಮಣಿಪಾಲ ಸ್ವಾಗತಿಸಿ, MEIF ಉಡುಪಿ ಝೋನಲ್ ಕನ್ವೀನರ್ ಜಿ.ಎಂ ಅನ್ವರ್ ಹುಸೈನ್ ವಂದಿಸಿದರು. MET ಶಾಲಾ ಆಡಳಿತಾಧಿಕಾರಿ ಜುನೈದ ಉಪಸ್ಥಿತರಿದ್ದರು. MEIF ಪ್ರೋಗ್ರಾಮ್ ಸೆಕ್ರೆಟರಿ  ರಿಯಾಝ್ ಅಹ್ಮದ್ ಹಾಗೂ  ಬಶೀರ್ (ಅಲ್ ಇಹ್ಸಾನ್ ಮೂಳೂರು P.R.O) ಪ್ರತಿಭಾ ಸ್ಪರ್ಧೆಗಳನ್ನು ಸಂಯೋಜಿಸಿದರು.

ಕಾರ್ಯಕ್ರಮದಲ್ಲಿ ಹೆಜಮಾಡಿ, ಮೂಳೂರು, ಶಿರೂರು, ಗಂಗೊಳ್ಳಿ, ಕಂಡ್ಲೂರು, ಉದ್ಯಾವರ, ಹೂಡೆ, ಉಡುಪಿ, ಕೋಡಿ -ಕುಂದಾಪುರ ಪ್ರದೇಶದ MEIF ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದರು.

ಸ್ಪರ್ಧೆಗಳು ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿದ್ದು, ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು 2023 ಜನವರಿ ತಿಂಗಳಿನಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ  ನಡೆಯಲಿರುವ  ಜಿಲ್ಲಾ ಮಟ್ಟದ "Talent Hunt" ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಡ್ರಾಯಿಂಗ್ - ಫಾತಿಮಾ ಅಥಾರುನ್ನಿಸಾ (ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಕಾಪು),
ಕ್ವಿಝ್ - ಮುಹಮ್ಮದ್ ರಫಾನ್ ಮತ್ತು ಕರಣಿ ಆಯಿಷಾ ಇಫಾಮ್ (ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಕಾಪು)
ಪಿಕ್ & ಸ್ಪೀಕ್ - ಅಝ್ಕ ಫಹ್ಮೀನ್ ( ಝಿಯಾ ಆಂಗ್ಲ ಮಾಧ್ಯಮ ಶಾಲೆ, ಕಂಡ್ಲೂರು)
ಸೈನ್ಸ್ ಮಾಡೆಲ್ - ಮುಹಮ್ಮದ್ ಅದ್ನಾನ್ & ಲಿಬಾ ಅಬ್ದುಲ್ ರಾಝಕ್ (ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಕಾಪು)

ಕಾರ್ಯಕ್ರಮದ ಪ್ರಾಯೋಜಕತ್ವವನ್ನು MET ಶಾಲಾ ಮುಖ್ಯಸ್ಥರಾದ ಶಬೀಹ್ ಅಹ್ಮದ್ ಖಾಝಿ ಅವರು ವಹಿಸಿದ್ದರು.

Similar News