ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ ಕೆಎಸ್‍ಎಂಸಿಎ

Update: 2022-12-07 14:29 GMT

ಬೆಂಗಳೂರು, ಡಿ.6: ಸರಕಾರಿ ಜಾಹೀರಾತು ಸಂಸ್ಥೆ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪೆನಿಯೂ ಸುವರ್ಣ ಮಹೋತ್ಸವ ವರ್ಷ 2021-22ನೆ ಸಾಲಿನ ತನ್ನ ಲಾಭಾಂಶದಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದೆ.

2021-22ರ ಸಾಲಿನಲ್ಲಿ ಕಂಪೆನಿಯೂ 358.13 ಕೋಟಿ ರೂ. ವಹಿವಾಟು ನಡೆಸಿದ್ದು, ತೆರಿಗೆ ನಂತರ 11.14 ಕೋಟಿ ರೂ. ಲಾಭ ಗಳಿಸಿದೆ. ಅಲ್ಲದೆ, ಕೋವಿಡ್-19ರ ಸೋಂಕಿನಿಂದ ಕಳೆದ ಸಾಲಿನಲ್ಲಿ ಎಲ್ಲ ವ್ಯವಹಾರಗಳೂ ತಟಸ್ಥವಾಗಿತ್ತು. ಆದರೂ ಕಂಪೆÀನಿಯು ತನ್ನ ಪರಿಶ್ರಮ ಮತ್ತು ಸಮರ್ಪಿತ ಸೇವೆಯಿಂದ ಲಾಭ ಗಳಿಕೆಯ ಪಥದಲ್ಲಿ ಮುನ್ನಡೆಯುತ್ತಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸಮ್ಮುಖದಲ್ಲಿ ಕಂಪೆನಿಯ ಅಧ್ಯಕ್ಷ ಎಂ.ಎಸ್.ಕರಿಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಂಪೆನಿ ನಿರ್ದೇಶಕರಾದ ವೀರೇಶ್ ಸಂಗಳದ, ಎಚ್.ಆರ್.ತೀರ್ಥಲಿಂಗಪ್ಪ (ತೀರ್ಥೇಶ್), ಕೆ.ಜಿ.ವಸಂತಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸಿದ್ದಲಿಂಗಪ್ಪ ಬಿ.ಪೂಜಾರಿ, ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಸ್.ನಂದಿಶ್, ವ್ಯವಸ್ಥಾಪಕ ನಾಗಪ್ಪ ಕಿತ್ತೂರು ಸೇರಿದಂತೆ ಪ್ರಮುಖರಿದ್ದರು.

Similar News