ಅಪಘಾತವಾಗಿರುವ ಜಪ್ತಿ ಮಾಡಲಾದ ವಾಹನ 24 ಗಂಟೆಯೊಳಗೆ ಮಾಲಕರಿಗೆ ಹಸ್ತಾಂತರ: ಬೆಂಗಳೂರು ಸಂಚಾರ ಆಯುಕ್ತ ಎಂ.ಎ.ಸಲೀಂ

Update: 2022-12-07 16:02 GMT

ಬೆಂಗಳೂರು, ಡಿ.7: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿ ಜಪ್ತಿ ಮಾಡಿದ ವಾಹನಗಳನ್ನು 24 ಗಂಟೆಯೊಳಗೆ ಹಿಂತಿರುಗಿಸುವಂತೆ ಆಯಾ ವ್ಯಾಪ್ತಿಯ ಠಾಣಾಧಿಕಾರಿಗಳಿಗೆ ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ಸೂಚಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತವಾಗಿರುವ ವಾಹನಗಳನ್ನು ಸಂಚಾರ ಪೊಲೀಸ್ ಠಾಣೆಗಳ ಮುಂದೆ ತಿಂಗಳುಗಟ್ಟಲೇ ಇರಿಸಿಕೊಳ್ಳುವಂತಿಲ್ಲ. ಜತೆಗೆ, ತಪಾಸಣೆ ನೆಪದಲ್ಲಿ ಠಾಣೆಗಳ ಮುಂದೆ ವಾಹನ ಇರಿಸಿಕೊಳ್ಳುವುದು ಸರಿಯಲ್ಲ ಎಂದರು.

ಅಪಘಾತ ಸಂಭವಿಸಿದ ಬಳಿಕ ವಾಹನಗಳನ್ನು 24 ಗಂಟೆಯೊಳಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಾಲಕರಿಗೆ ಹಿಂತಿರುಗಿಸಲಾಗುವುದು ಎಂದ ಅವರು, ಠಾಣೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು ಇದರಿಂದ ನಗರ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

Similar News