ಕ್ವಾರ್ಟರ್ ಫೈನಲ್ ಗೆ ವೇದಿಕೆ ಸಜ್ಜು, ಡಿ.9 ರಿಂದ ಅಂತಿಮ-8 ರ ಪಂದ್ಯ ಆರಂಭ

Update: 2022-12-07 17:45 GMT

ದೋಹಾ, ಡಿ.7: ಖತರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್-2022ರಲ್ಲಿ ಎಲ್ಲ ನಾಲ್ಕು ಕ್ವಾರ್ಟರ್ ಫೈನಲ್ ನಲ್ಲಿ ಸೆಣಸಾಡಲಿರುವ ತಂಡಗಳ ನಿರ್ಧಾರವಾಗಿದೆ. ಅಂತಿಮ-8ರ ಘಟ್ಟಕ್ಕೆ ಪ್ರವೇಶಿಸಿರುವ ತಂಡಗಳೆಂದರೆ: ಕ್ರೊಯೇಶಿಯ, ಬ್ರೆಝಿಲ್, ನೆದರ್ಲ್ಯಾಂಡ್ಸ್, ಅರ್ಜೆಂಟೀನ, ಇಂಗ್ಲೆಂಡ್, ಫ್ರಾನ್ಸ್, ಮೊರೊಕ್ಕೊ ಹಾಗೂ ಪೋರ್ಚುಗಲ್.

ಜಪಾನ್-ಕ್ರೊಯೇಶಿಯ ಹಾಗೂ ಮೊರೊಕ್ಕೊ-ಸ್ಪೇನ್ ನಡುವಿನ  ಸೂಪರ್-16 ಪಂದ್ಯಗಳು ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದವು. ಈ ಎರಡು ಪಂದ್ಯಗಳ ಫಲಿತಾಂಶ ಪೆನಾಲ್ಟಿ ಶೂಟೌಟ್ ನಲ್ಲಿ ನಿರ್ಧಾರವಾಗಿದ್ದವು.

ಖತರ್ ವಿಶ್ವಕಪ್ ನಲ್ಲಿ ಈ ತನಕ ಒಟ್ಟು 56 ಪಂದ್ಯಗಳನ್ನು ಆಡಲಾಗಿದೆ. ಇದೀಗ 8 ತಂಡಗಳು ಸ್ಪರ್ಧಾಕಣದಲ್ಲಿ ಉಳಿದಿವೆ. ಇವುಗಳ ಪೈಕಿ ನಾಲ್ಕು ತಂಡಗಳು ಮಾಜಿ ಚಾಂಪಿಯನ್ಗಳಾಗಿದ್ದು, ಇನ್ನುಳಿದ ನಾಲ್ಕು ತಂಡಗಳು ಚೊಚ್ಚಲ ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ.

ಕ್ವಾರ್ಟರ್ ಫೈನಲ್ ಪಂದ್ಯಗಳು ಡಿಸೆಂಬರ್ 9ರಿಂದ ಆರಂಭವಾಗಲಿದೆ. ಟೂರ್ನಮೆಂಟ್ ನ ಸೆಮಿ ಫೈನಲ್ ಪಂದ್ಯಗಳು ಡಿಸೆಂಬರ್ 14 ಹಾಗೂ

15 ರಂದು ನಡೆಯಲಿದೆ. ಫೈನಲ್ ಪಂದ್ಯವು ಡಿಸೆಂಬರ್ 18ರಂದು ನಿಗದಿಯಾಗಿದೆ.

Similar News