ಗುಜರಾತ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನದತ್ತ ಸಾಗಿದ ಕಾಂಗ್ರೆಸ್

Update: 2022-12-08 05:24 GMT

ಹೊಸದಿಲ್ಲಿ:  ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಸುಮಾರು 150 ಸ್ಥಾನಗಳನ್ನು ಪಡೆಯಬಹುದು. ಇದು ಬಿಜೆಪಿಯ ಅತ್ಯುತ್ತಮ ಸಾಧನೆಯಾಗಿದೆ.

ಅದೇ ಸಮಯದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅತ್ಯಂತ ಕೆಟ್ಟ ಪ್ರದರ್ಶನದತ್ತ ಸಾಗುತ್ತಿದೆ.

2017 ರ ವಿಧಾನಸಭಾ ಚುನಾವಣೆಯಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ  ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು (77) ಗೆದ್ದಿತ್ತು. ಆದರೆ ಹೊಸ ಪಕ್ಷ ಎಎಪಿಯ ಉತ್ತಮ ಪ್ರದರ್ಶನದಿಂದಾಗಿ ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾನಗಳನ್ನು ಹಾಗೂ ಮತ ಹಂಚಿಕೆ ಎರಡನ್ನೂ ಕಳೆದುಕೊಂಡಿದೆ.

Similar News