ಯುವಕ ನಾಪತ್ತೆ

Update: 2022-12-08 14:30 GMT

ಮಂಗಳೂರು, ಡಿ.8: ಬೈಕಂಪಾಡಿಯ ಬ್ರೈಟ್ ಫ್ಯಾಕ್ಟರಿಯ ಟೈಲ್ಸ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕನಕಪ್ಪರಾಮಪ್ಪ ಮಾದರ (40) ನ.29ರಿಂದ ಕಾಣೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5.5 ಅಡಿ ಎತ್ತರ, ಕಪ್ಪುಮೈಬಣ್ಣ, ಸಾಧಾರಣ ಶರೀರ ಹೊಂದಿರುವ ಇವರು ಕನ್ನಡ ಹಾಗೂ ಹಿಂದಿ ಮಾತನಾಡುತ್ತಾರೆ. ಕಾಣೆಯಾದ ದಿನ ನೀಲಿ ಶರ್ಟ್ ಹಾಗೂ ಬಿಳಿ ಬಣ್ಣದ ಲುಂಗಿ ಧರಿಸಿರುತ್ತಾರೆ. ಇವರನ್ನು ಕಂಡವರು ಪಣಂಬೂರು ಪೊಲೀಸ್ ಠಾಣೆ (ದೂ.ಸಂ: 0824-2220530,9480805355, 9480805331, ಕಂಟ್ರೋಲ್ ರೂಂ ಸಂ: 0824-2220800)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Similar News