5 ಮೆಟ್ರೋ ಸ್ಟೇಷನ್‍ಗಳಲ್ಲಿ ವಾಹನ ಬ್ಯಾಟರಿ ವಿನಿಮಯ ಕೇಂದ್ರ ಆರಂಭ: ಅಂಜುಮ್ ಪರ್ವೇಝ್

Update: 2022-12-08 16:43 GMT

ಬೆಂಗಳೂರು, ಡಿ.8: ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಗರದ ಐದು ಮೆಟ್ರೋ ಸ್ಟೇಷನ್‍ಗಳಲ್ಲಿ ವಾಹನಗಳಿಗೆ ಬ್ಯಾಟರಿ ವಿನಿಮಯ ಸೇವೆ ಒದಗಿಸಲು ‘ಹೋಂಡಾ ಬ್ಯಾಟರಿ ವಿನಿಮಯ ಕೇಂದ್ರ’ಗಳನ್ನು ಸ್ಥಾಪಿಸಿದೆ ಎಂದು ನಮ್ಮ ಮೆಟ್ರೋನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಝ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿದ್ಯುತ್ಚಾಲಿತ ವಾಹನ ಮತ್ತು ಸಂಗ್ರಹ ನೀತಿ 2017ಗೆ ಅನುಗುಣವಾಗಿ ಕೆಆರ್ ಮಾರುಕಟ್ಟೆ, ನ್ಯಾಷನಲ್ ಕಾಲೇಜ್, ಬನಶಂಕರಿ, ಟ್ರಿನಿಟಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‍ಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಈ ಮೂಲಸೌಕರ್ಯವು ಮೆಟ್ರೊ ಪ್ರಯಾಣಿಕರು ತಮ್ಮ ಮನೆ ಬಾಗಿಲಿನಿಂದ ಮೆಟ್ರೊ ನಿಲ್ದಾಣದವರೆಗೆ ಪ್ರಯಾಣಿಸಲು ವಿದ್ಯುತ್ಚಾಲಿತ ವಾಹನಗಳನ್ನು ಬಳಸಿಕೊಳ್ಳಲು ಅಗತ್ಯವಾದ ನೆರವು ಕಲ್ಪಿಸಿಕೊಡಲಿದೆ ಎಂದು ತಿಳಿಸಿದ್ದಾರೆ.

Similar News